ವೃದ್ಧ ದಂಪತಿ ಡಬಲ್ ಮರ್ಡರ್ ಕೇಸ್ : ಮೊಮ್ಮಗ ಸೇರಿ ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Double-Murder--01

ಬೆಂಗಳೂರು, ನ.29- ಎಚ್‍ಎಎಲ್ ವ್ಯಾಪ್ತಿಯ ಅಶ್ವತ್ಥ ನಗರದಲ್ಲಿ ನಡೆದಿದ್ದ ದಂಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಮ್ಮಗ ಸೇರಿ ಮೂವರನ್ನುಬಂಧಿಸುವಲ್ಲಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ದಂಪತಿಯ ಮೊಮ್ಮಗ ಪ್ರಮೋದ್ ಮತ್ತು ಆತನ ಸ್ನೇಹಿತರಾದ ಪ್ರವೀಣ್, ಹಸನ್‍ಪಾಷ ಬಂಧಿತ ಆರೋಪಿಗಳು ಎಂದು ವೈಟ್‍ಫೀಲ್ಡ್ ಉಪವಿಭಾಗದ ಡಿಸಿಪಿ ಅಬ್ದುಲ್ ಅಹಾದ್ ಅವರು ಈ ಸಂಜೆಗೆ ತಿಳಿಸಿದ್ದಾರೆ.

ಆರೋಪಿಗಳಿಂದ 250 ಗ್ರಾಂ ಚಿನ್ನಾಭರಣ, 50 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.   ಕಳೆದ ಎರಡು ದಿನಗಳ ಹಿಂದೆ ಈ ದಂಪತಿಯನ್ನು ಕೊಲೆ ಮಾಡಿ ಗ್ಯಾಸ್ ಆನ್ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ನಿನ್ನೆ ಸಂಜೆ ಪ್ರಕರಣ ಬೆಳಕಿಗೆ ಬಂದು ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಈ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ತಂಡ ವಿವಿಧ ಆಯಾಮಗಳಿಂದ ತನಿಖೆ ನಡೆಸಿ ಮೊಮ್ಮಗ ಪ್ರಮೋದ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕೆಲವು ಮಾಹಿತಿಗಳು ಬೆಳಕಿಗೆ ಬಂದಿದ್ದವು.

ತದನಂತರ ಮಾರತ್ತಹಳ್ಳಿ ಪೊಲೀಸರು ಈತನ ಸ್ನೇಹಿತ ಪ್ರವೀಣ್‍ನನ್ನು ತೀವ್ರ ವಿಚಾರಣೆ ನಡೆಸಿದಾಗ ಮತ್ತೊಬ್ಬ ಪ್ರಮುಖ ಆರೋಪಿ ಹಸನ್ ಪಾಷ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂತು. ಆರೋಪಿ ಹಸನ್‍ಪಾಷ ಏರ್‍ಪೊೀರ್ಟ್ ಕಾಂಪೌಂಡ್ ಬಳಿ ಇದ್ದಾನೆಂಬ ಮಾಹಿತಿ ತಿಳಿದ ತಂಡ ಆತನನ್ನು ಬಂಧಿಸಲು ಅಲ್ಲಿಗೆ ಧಾವಿಸಿತು. ಆಗ ಪಾಷ ಕಾನ್ಸ್‍ಟೆಬಲ್ ಒಬ್ಬರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ.
ಆ ವೇಳೆ ಆತ್ಮ ರಕ್ಷಣೆಗಾಗಿ ಸಬ್‍ಇನ್ಸ್‍ಪೆಕ್ಟರ್ ಪ್ರಶೀಲಾ ಹಾರಿಸಿದ ಗುಂಡು ಆತನ ಕಾಲಿಗೆ ತಗುಲಿ ಕುಸಿದು ಬಿದ್ದ. ಆಗ ಸುತ್ತುವರಿದ ಪೊಲೀಸರು ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡ ಪೊಲೀಸ್ ಕಾನ್ಸ್‍ಟೆಬಲ್‍ರೊಬ್ಬರನ್ನು ಸಹ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಬ್ದುಲ್ ಅಹಾದ್ ಅವರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin