ವೆಂಕಟರೆಡ್ಡಿ ಅಕಾಲಿಕ ನಿಧನ ತುಂಬಲಾರದ ನಷ್ಟ: ಶ್ರೀರಾಮರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Bagepalli
ಬಾಗೇಪಲ್ಲಿ, ಆ.24- ದಿನನಿತ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಬೊಮ್ಮಸಂದ್ರ ವೆಂಕಟರೆಡ್ಡಿ ಅವರ ಅಕಾಲ ಮರಣ ತಾಲೂಕಿಗೆ ತುಂಬಲಾರದ ನಷ್ಟ ಎಂದು ರಾಜ್ಯ ಸಿಪಿಎಂ ಪಕ್ಷದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಕಂಬನಿ ಮಿಡಿದಿದ್ದಾರೆ. ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಶಾಖೆಯ ಆಶ್ರಯದಲ್ಲಿ ದಿ.ವೆಂಕಟರೆಡ್ಡಿ ಗೌರವಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಇಂದು ಜನ ನಾಯಕರು ಎಂದು ಜನರಿಂದಲೇ ಕರೆಸಿಕೊಳ್ಳುವ ನಾಯಕರ ಸಂಖ್ಯೆ ಕಡಿಮೆಯಾಗುತ್ತಿದೆ. ವೆಂಕಟರೆಡ್ಡಿ ಕರ್ನಾಟಕ ಪ್ರಾಂತ ರೈತ ಸಂಘದಲ್ಲಿ ಕಾರ್ಯದರ್ಶಿಯಾಗಿ ಜಿಲ್ಲೆಯ ಜನರ ಜೀವಂತ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.

40 ಸದಸ್ಯರ ದೊಡ್ಡ ಕುಟುಂಬ ನಿರ್ವಹಣೆ ಮಾಡುತ್ತ ಅವರ ಮಾಡಿರುವ ಹೋರಾಟಗಳು ಚಿರಸ್ಮರಣಿಯ ಎಂದ ಅವರು, ಕರ್ನಾಟಕ ಪ್ರಾಂತ ರೈತ ಸಂಘ ಇಂತಹ ವೆಂಕಟರೆಡ್ಡಿ ಅವರುಗಳನ್ನು ಇನ್ನು ಹೆಚ್ಚಾಗಿ ಬೆಳೆಸಿ ಆವರ ಆದರ್ಶಗಳನ್ನು ಜನರ ಜೀವನದಲ್ಲಿ ಜೀವಂತವಾಗಿ ಇರುವಂತೆ ಮಾಡಬೇಕಾಗಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್, ತಾಲೂಕು ಕಾರ್ಯದರ್ಶಿ ಜೆಸಿಬಿ ಮಂಜುನಾಥರೆಡ್ಡಿ ಮಾತನಾಡಿದರು.

ವೆಂಕಟರೆಡ್ಡಿ ಗೌರವಾರ್ಥ 2 ನಿಮಿಷ ಮನಾಚರಣೆ ನಡೆಸಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.  ನಿವೃತ್ತ ತಹಸೀಲ್ದಾರ್.ಹನುಮಂತರಾಯ,ನಿವೃತ್ತ ಗ್ರೇಡ್-2 ತಹಸೀಲ್ದಾರ್ ಎಸ್.ಮುನಿರಾಮಯ್ಯ, ಜಿಪಂ ಮಾಜಿ ಸದಸ್ಯ ಬೂರಗಮಡುಗು ರಾಮರೆಡ್ಡಿ,ವೆಂಕಟರೆಡ್ಡಿ ಸಹೋದರ ಮರಿರೆಡ್ಡಿ ನುಡಿನಮನ ಸಲ್ಲಿಸಿದರು.  ಜಿಪಂ ಸದಸ್ಯೆ ನಾರಾಯಣಮ್ಮ ವೆಂಕಟೇಶ್, ಜಿಲ್ಲಾ ಸಿಪಿಎಂ ಪಕ್ಷದ ಕಾರ್ಯದರ್ಶಿ ಮಂಡಳಿಯ ಸದಸ್ಯ ಚನ್ನರಾಯಪ್ಪ,ತಾಲೂಕು ಡಿವೈಎಫ್‌ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ,ಪರಗೋಡು ಗ್ರಾಪಂ ಮಾಜಿ ಅದ್ಯಕ್ಷ ಬಿ.ಎಸ್. ಲೋಕೇಶ್,ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ,ಪುರಸಭೆ ಸದಸ್ಯ ಬಿ.ಎಚ್.ಆರೀಫ್, ಹಾಗೂ ಮುಖಂಡರಾದ ಗೋವರ್ದನಚಾರಿ,ಕಂಚುಕೋಟ ಮೂರ್ತಿ,ಎ.ರಮೇಶ್, ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin