ವೆನಿಜುವೆಲಾ : ಜೈಲಿನಲ್ಲಿ ಭುಗಿಲೆದ್ದ ಭೀಕರ ಹಿಂಸಾಚಾರಕ್ಕೆ 37 ಕೈದಿಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

37-Killed-021

ಕಾರಾಕಾಸ್, ಆ.17-ವೆನಿಜುವೆಲಾದ ದಕ್ಷಿಣ ರಾಜ್ಯ ಅಮೆಜಾನಾಸ್‍ನ ಜೈಲಿನಲ್ಲಿ ಭುಗಿಲೆದ್ದ ಭೀಕರ ಹಿಂಸಾಚಾರದಲ್ಲಿ ಕನಿಷ್ಠ 37 ಮಂದಿ ಕೈದಿಗಳು ಮೃತಪಟ್ಟು, ಅಧಿಕಾರಿಗಳೂ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ಪುರ್ಟೊ ಅಯಕುಕೋ ಪಟ್ಟಣದ ಬಂದೀಖಾನೆಯಲ್ಲಿ ನಡೆದ ಹಿಂಸಾಚಾರ ಮತ್ತು 37 ಸೆರೆವಾಸಿಗಳ ಹತ್ಯೆ ಪ್ರಕ್ರರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.ಸೆರೆಮನೆಯಲ್ಲಿ ನಡೆದ ಹತ್ಯಾಕಾಂಡದಲ್ಲಿ 35 ಮೃತದೇಹಗಳು ಪತ್ತೆಯಾಗಿದೆ ಎಂದು ಗೌರ್ನರ್ ಲಿಬೊರಿಯೊ ಗೌರುಲಿಯಾ ಟ್ವೀಟರ್‍ನಲ್ಲಿ ಮಾಹಿತಿ ನೀಡಿದ್ದಾರೆ.

ನಿನ್ನೆ ಒಂದು ಗಂಟೆ ಕಾಲ ನಡೆದ ದೀರ್ಘಾವಧಿ ಘರ್ಷಣೆ ಮತ್ತು ಹಿಂಸಾಚಾರದಲ್ಲಿ 27 ಕೈದಿಗಳು ಹತರಾಗಿದ್ದು, 14 ಅಧಿಕಾರಿಗಳಿಗೂ ಗಾಯಗಳಾಗಿವೆ.
ಕಾರಾಗೃಹದಲ್ಲಿ ಕೊಲೆಗೀಡಾದ ಎಲ್ಲ 37 ಮಂದಿ ಕೈದಿಗಳೇ ಆಗಿದ್ದಾರೆ ಎಂದು ಜೈಲು ಉಸ್ತುವಾರಿ ಸಮೂಹಗಳು ಖಚಿತಪಡಿಸಿವೆ.  ಕ್ಷುಲ್ಲಕ ಕಾರಣಕ್ಕಾಗಿ ಕೈದಿಗಳ ನಡುವೆ ತಲೆದೋರಿದ ಜಗಳ ವಿಕೋಪಕ್ಕೆ ತಿರುಗಿ ಭೀಕರ ಹಿಂಸಾಚಾರ ನಡೆಯಿತು. ಈ ನರಮೇದದ ಸಂದರ್ಭದಲ್ಲಿ ಜೈಲಿನಲ್ಲಿ 105 ಸೆರೆಯಾಳುಗಳು ಇದ್ದರು. ವೆನಿಜುವೆಲಾದ ಉರಿಬಾನಾ ಬಂಧಿಖಾನೆಯಲ್ಲಿ 2013ರಲ್ಲಿ ನಡೆದ ಭೀಕರ ಗಲಭೆಯಲ್ಲಿ 60 ಮಂದಿ ಮೃತಪಟ್ಟು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

 

Facebook Comments

Sri Raghav

Admin