‘ವೆನಿಲಾ’ ಗಾನ ಭಜನಾದಲ್ಲಿ ಚಾಲೆಂಜಿಂಗ್ ಸ್ಟಾರ್

ಈ ಸುದ್ದಿಯನ್ನು ಶೇರ್ ಮಾಡಿ

venila-1
ಚಿತ್ರರಂಗದ ಕಾರ್ಯಕ್ರಮಗಳು ಸಿನಿಕಾನ್ ಸಿಟಿಯಲ್ಲಿ ನಡೆಯುವುದು ಸಹಜ.ಅಪರೂಪಕ್ಕೆ ಎನ್ನುವಂತೆ ವೆನಿಲ್ಲಾ ಚಿತ್ರದ ಧ್ವನಿಸಾಂದ್ರಿಕೆಯು ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿತು.  ಜಯತೀರ್ಥ ನಿರ್ದೇಶನದ ಈ ವೆನಿಲಾ ಚಿತ್ರ ಒಂದು ಮರ್ಡರ್ ಮಿಸ್ಟ್ರಿಯ ಕಥೆಯಾಗಿದ್ದು , ಈ ಚಿತ್ರದ ನಾಯಕನಾದ ಅವಿನಾಶ್ ಮಂಡ್ಯ ರಮೇಶ್ ಶಾಲೆಯಲ್ಲಿ ತರಬೇತಿ ತೆಗೆದುಕೊಂಡು ಈಗ ಬೆಳ್ಳಿ ಪರದೆಯನ್ನು ಪ್ರವೇಶ ಮಾಡುತ್ತಿದ್ದಾನೆ. ಇವರಿಗೆ ಜೋಡಿಯಾಗಿ ತುಮಕೂರು ಮೂಲದ ಸ್ವಾತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಜಯರಾಮು ಅವರು ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು , ಬಿ.ಜೆ.ಭರತ್ ಸಂಗೀತವನ್ನು ನೀಡುತ್ತಿದ್ದಾರೆ. ಹಾಗೂ ರವಿಶಂಕರ್‍ಗೌಡ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದು , ವೆನಿಲಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದು ವಿಶೇಷವಾಗಿದೆ. ಇವರೊಂದಿಗೆ ಮಂಡ್ಯ ರಮೇಶ್ ಕೂಡ ವೇದಿಕೆಯ ಮೇಲೆ ಹಾಜರಿದ್ದು, ತಂಡಕ್ಕೆ ಶುಭವನ್ನು ಕೋರಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು , ಚಿತ್ರವು ಮಾರ್ಚ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Facebook Comments

Sri Raghav

Admin