ವೆಬ್ಸೈಟ್ನಲ್ಲಿ ನಿಂದನೆಗೆ ಬೇಸತ್ತು ಯೋಧ ಆತ್ಮಹತ್ಯೆ
ಮುಂಬೈ: ಮಾ.3- ಸಹಾಯಕ ಎಂದು ನಿಂದಿಸುವ ವಿಡಿಯೋ ವೆಬ್ಸೈಟ್ನಲ್ಲಿ ಪ್ರಸಾರ ಆಗಿದ್ದಕ್ಕೆ ನೊಂದು ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಎನ್ನಲಾಗಿರುವ ಘಟನೆ ಮಹಾರಾಷ್ಟ್ರದ ಡಿಯೊಲಾಲಿ ಕಾಂಟ್ಯಾನ್ಮೆಂಟ್ನಲ್ಲಿ ನಡೆದಿದೆ. ಗನ್ನರ್ ರಾಯ್ ಮ್ಯಾಥಿವ್ ಮೃತಪಟ್ಟ ಯೋಧನಾಗಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇದು ಆತ್ಮಹತ್ಯೆಯೇ ಅಥವಾ ಕೊಲೆಯೋ ಎಂಬುದರ ಬಗ್ಗೆ ಗೊತ್ತಾಗಲಿದೆ. ಅಲ್ಲದೆ ಈ ಪ್ರಕರಣವನ್ನು ಇದೀಗ ಅಪಘಾತದಿಂದ ಮೃತಪಟ್ಟಿರುವುದಾಗಿ ಎಂದು ದೂರು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಶುಕ್ರವಾರ ಯೋಧ ಕಾಣೆಯಾಗಿದ್ದ, ಈಗ ಶವವಾಗಿ ಪತ್ತೆಯಾಗಿರುವ ಸುದ್ದಿ ಕೇಳಿ ಆಘಾತವಾಯಿತು.
ನಾಯಿಯಂತೆ ನಡೆಯುತ್ತಿಯಾ ಅಥವಾ ಶಾಲೆ ಮಕ್ಕಳಂತೆ ಮಾತನಾಡುತ್ತೀಯಾ ಎಂದು ಮೇಲಾಧಿಕಾರಿಗಳು ನೀಡಿದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಹಿರಿಯ ಅಧಿಕಾರಿಗಳು ತಿರಸ್ಕರಿದ್ದಾರೆ. ತನಿಖೆಯಿಂದ ಈ ಬಗ್ಗೆ ಸ್ಪಷ್ಟ ಉತ್ತರ ಸಿಗಲಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನಡೆದ ಬಳಿಕ ವೈಬ್ ಸೈಟ್ನಲ್ಲಿ ವಿಡಿಯೋವನ್ನು ತೆಗೆದುಹಾಕಲಾಗಿದೆ. ಈ ನಡುವೆ ಮೊತ್ತೊಬ್ಬ ಯೋಧ ಲ್ಯಾನ್ಸ್ ನಾಯಕ್ ಸಿಂಗ್ ಹಿರಿಯ ಅಧಿಕಾರಿಗಳು ಬಟ್ಟೆತೊಳೆಯುವ ಕೆಲಸ, ನಾಯಿಯಂತೆ ಸ್ವಾಮಿ ನಿಷ್ಠೆ ತೋರುವುದು ಮತ್ತು ಬೂಟ್ ಪಾಲಿಶ್ ಕೆಲಸ ಮಾಡುವಂತೆ ಕಿರುಕುಳ ನೀಡುತ್ತಾರೆ ಎಂಬುದರ ಮಾತನಾಡಿ ಯುಟ್ಯೂಬ್ ಹಾಕಿದ್ದಾರೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೂಡ ಪತ್ರ ಬರೆಯಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS