ವೆಸ್ಪಾ ಮೋಪೆಡ್ ಕಾರು ಸಾಕು, ಕಡೀಷನ್ಡ್ ಕಾರ್ ಬೇಡ : ಬೆಳಗಾವಿ ಮೇಯರ್ ಸರಿತಾ ಮುನಿಸು

ಈ ಸುದ್ದಿಯನ್ನು ಶೇರ್ ಮಾಡಿ

2

ಬೆಳಗಾವಿ,ಸೆ.30- ನಾನು ಹಳದಿ ವೆಸ್ಪಾ ಮೋಪೆಡ್ ಆಯ್ಕೆ ಮಾಡಿಕೊಂಡಿದ್ದೇನೆ, ಅದೇ ಸಾಕು, ಕಂಡಿಷ್ನನ್ಡ್ ಸರಕಾರಿ ಕಾರು ಬೇಕಾಗಿಲ್ಲ ಎಂದು ಬೆಳಗಾವಿ ಮೇಯರ್ ಸರಿತಾ ಪಾಟೀಲ ಸರಕಾರದ ವಿರುದ್ದ ಮುಸುಕಿನ ಮುನಿಸು ತೋರಿದ್ದಾರೆ.ಮಹಾನಗರ ಪಾಲಿಕೆ ಉಪಮೇಯರ್ ಸಂಜಯ ಶಿಂಧೆ ತಮಗೆ ಕೊಟ್ಟ ಸರಕಾರಿ ಕಾರು ಸುವ್ಯವಸ್ಥಿತ ಇಲ್ಲ ಎಂದು ಮುನಿಸಿಕೊಂಡು ಆಗಲೇ ಸ್ವಂತದ ಕಾರಿನಲ್ಲಿ ಓಡಾಡುತ್ತಿದ್ದಾರೆ. ಇದರ ಬೆನ್ನಿಗೆ ಮೇಯರ್ ಅವರನ್ನು ಕೇಳಲಾಗಿ ನನಗೆ ಇಂಥದ್ದೆ ಕಾರು ಬೇಕು ಎಂದೇನಿಲ್ಲ. ನನಗೆ ನನ್ನ ಯೆಲೋ ವೆಸ್ಪಾ ಮೊಪೆಡ್ ಬಹಳ ಇಷ್ಟ. ಅದನ್ನೇ ಓಡಾಡಲು ಬಳಸುತ್ತೇನೆ.  ಆದರೆ ಮೇಯರ್ ಹುದ್ದೆ ಘಣತೆ ಕಾಯುವಂಥ ವಾಹನ ಕೊಡಲು ಸರಕಾರ ವಿಫಲವಾಗಿದೆ ಎಂದು ಮೇಯರ್ ಮೇಡಂ ಸುದ್ದಿಗಾರರ ಎದುರು ಅಲವತ್ತುಕೊಂಡರು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರ ಗಮನಕ್ಕೆ ನೂತನ ವಾಹನ ಕೊಡಿಸಲು ಕೋರಿಕೆ ಇಡಲಾಗಿದೆ ಆದರೆ ಅವರು ಅನುಮೋದನೆ ಮಾಡದೆ ಮೌನ ವಹಿಸಿದ್ದಾರೆ. ಅಧಿಕಾರಿಗಳಿಗೆ ಸುಮಾರು 6:30 ಲಕ್ಷದ ವಾಹನ ಖರೀದಿಗೆ ಅವಕಾಶ ಇದೆ. ಆದರೆ ಜನಪ್ರತಿನಿಧಿಗಳಿಗೆ ಬೆಲೆಯ ಇತಿಮಿತಿ ಇಲ್ಲ.

ಪಾಲಿಕೆಯಲ್ಲಿ 20 ಲಕ್ಷ ಹಣ ಲಭ್ಯವಿದ್ದು ಅದನ್ನು ಕಾರï ಖರೀದಿಗೆ ಬಳಸಬಹುದು ಆದರೆ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದು ನುಡಿದರು. ಸಿಕ್ಕ ಅಧಿಕಾರ ಅವಧಿಯಲ್ಲೇ ದೌಲತ್ತಿನಿಂದ ಹೊಸ ಕಾರಲ್ಲಿ ಓಡಾಡಬೇಕೆಂಬ ತಮ್ಮ ಮನದ ಇಂಗಿತ ಹೇಗೊ ಹೊರಹಾಕಿದ ಮೇಯರ್ ಮೇಡಂ, ಕೊನೆಗೆ ಸಾರ್ವಜನಿಕ ಸ್ಥಳದಲ್ಲಿ ಹಳೆಯ ಅಂಬಾಸಿಡರ್ ಕಾರು ಕೆಟ್ಟು ನಿಂತರೆ ನನಗಲ್ಲ, ಮೇಯರ್ ಹುದ್ದೆಗೆಯೇ ಅವಮಾನವಾಗುತ್ತದೆ. ನನ್ನ ತಾಳ್ಮೆ ಬಹಳವಿದೆ ಎಂದು ಕಾರ್¿ಬಾರಗೆ ತೆರೆ ಎಳೆದರು.

 

► Follow us on –  Facebook / Twitter  / Google+

Facebook Comments

Sri Raghav

Admin