ವೈದ್ಯರು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು, ಮುಷ್ಕರದಿಂದಲ್ಲ : ಡಾ.ಹರೀಶ್

ಈ ಸುದ್ದಿಯನ್ನು ಶೇರ್ ಮಾಡಿ

Doctor--01

ಬೆಂಗಳೂರು, ನ.15- ಜನರಿಂದ ಚುನಾಯಿತವಾದ ಸರ್ಕಾರ ಕಾನೂನು ಕಾಯ್ದೆ ಜಾರಿಗೆ ತರುವ ಅಧಿಕಾರವಿದೆ. ಅದರಂತೆ ಜನರ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕಾದ ಜವಾಬ್ದಾರಿ ಇದೆ ಎಂದು ಪ್ರಖ್ಯಾತ ವೈದ್ಯ ಲಂಡನ್‍ನಲ್ಲಿ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗೆ ನಿಯಂತ್ರಣ ಕಾಯ್ದೆ ಕುರಿತಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ವೈದ್ಯರ ಹೋರಾಟ ದುರಾದೃಷ್ಟಕರ. ಇದೊಂದು ಕಠಿಣ ಸಂದರ್ಭ, ಸೂಕ್ಷ್ಮ ವಿಷಯ ಆದರೂ ಈಗ ಹೊಸ ಕಾಯ್ದೆ ಜಾರಿಗೆ ಬರುತ್ತಿರುವುದು ಸರಿಯಾದ ನಿರ್ಧಾರ ಎಂದು ಹೇಳಿದ್ದಾರೆ. ಏನೇ ವ್ಯತ್ಯಾಸವಿದ್ದರೂ ಅದನ್ನು ಕೂತು ಬಗೆಹರಿಸಿಕೊಳ್ಳಬೇಕೇ ಹೊರತು ಜನಸಾಮಾನ್ಯರಿಗೆ ತೊಂದರೆ ಮಾಡಿ ಸರ್ಕಾರದ ವಿರುದ್ಧ ಹೋರಾಡುವುದು ತರವಲ್ಲ ಎಂದಿದ್ದಾರೆ.

ಹಿಂದಿನಿಂದಲೂ ಸರ್ಕಾರಗಳು ಜನರ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದೆ. ಹೀಗಿರುವಾಗ ಅವರು ಖಾಸಗಿ ಆಸ್ಪತ್ರೆಗಳು ತಾವು ಹೂಡಿರುವ ಮೊತ್ತವನ್ನು ಹಿಂಪಡೆಯಲು ವೈದ್ಯಕೀಯ ಸೇವೆ ದುಬಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಲೂ ಕೂಡ ಭಾರತದಲ್ಲಿ ಆರೋಗ್ಯ ವಿಷಯಕ್ಕೆ ಬಂದರೆ ವಿನಿಯೋಗಿಸುತ್ತಿರುವ ಹಣ ಕೂಡ ಕಡಿಮೆ. ಮುಂದಿನ ದಿನಗಳಲ್ಲಿ ಇದು ಬಹು ದೊಡ್ಡ ಸಮಸ್ಯೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಕ್ಷಯ ರೋಗ ಭಾರತವನ್ನು ಬಹುವಾಗಿ ಬಾಧಿಸುತ್ತಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇದೇ ರೀತಿ ಹೃದ್ರೋಗ ಹಾಗೂ ಏಡ್ಸ್, ಹೆಪೆಟೈಟಿಸ್‍ನಂತಹ ಮಾರಕ ಕಾಯಿಲೆಗಳು ಜನರ ಆರೋಗ್ಯದಲ್ಲಿ ಕಳವಳ ಸೃಷ್ಟಿಸುವಂತೆ ಮಾಡಿದೆ. ವೈದ್ಯರಿಗೆ ಸಾಮಾನ್ಯ ಜವಾಬ್ದಾರಿಯ ಅರಿವಿರಬೇಕು. ಜನರ ಆರೋಗ್ಯ ಕಾಪಾಡುವುದು ನಮ್ಮ ಹೊಣೆ ಎಂದು ತಿಳಿಯಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin