ವೈರಲ್ ಆಯ್ತು ವಾಸ್ತವ ಕಥೆ..! ಮುಷ್ಕರ ಮಾಡುವ ವೈದ್ಯನಿಗೆ ಪಾಠ ಕಲಿಸಿದ ಆಟೋ ಚಾಲಕ

ಈ ಸುದ್ದಿಯನ್ನು ಶೇರ್ ಮಾಡಿ

Auto--01

ಖಾಸಗಿ ವೈದ್ಯರ ಮುಷ್ಕರ ಮುಂದುವರೆದಿದೆ. ಅಮಾಯಕ ಜೀವಗಳ ಬಲಿ ಅಬಾಧಿತವಾಗಿ ಸಾಗಿದೆ. ಈ ವೇಳೆ ಆಟೋ ಚಾಲಕನೊಬ್ಬ ಖಾಸಗಿ ವೈದ್ಯನಿಗೆ ಅವರ ತಪ್ಪಿನ ಅರಿವು ಮಾಡಿಕೊಟ್ಟಿರುವ ರೀತಿ ಈಗ ಎಲ್ಲೆಲ್ಲೂ ವೈರಲ್ ಆಗಿದೆ.
ಅದು ಹೀಗಿದೆ….
ವೈದ್ಯ – ಏಯ್ ಆಟೋ… ಸ್ವಲ್ಪ ಆಸ್ಪತ್ರೆ ಹತ್ತಿರ ಬಿಡು… ತಕ್ಷಣ ಆಟೋ ಚಾಲಕ ವೈದ್ಯನನ್ನು ತನ್ನ ಆಟೋದಲ್ಲಿ ಹತ್ತಿಸಿಕೊಂಡು ಸೀದಾ ಆಸ್ಪತ್ರೆ ಬಳಿ ತಂದುಬಿಟ್ಟ. ಚಾಲಕ- 200 ರೂ. ಕೊಡಿ ಸರ್… ವೈದ್ಯನಿಗೆ ನಖ-ಶಿಖಾಂತ ಉರಿದು ಹೋಯ್ತು. ಏನಯ್ಯಾ… 50 ರೂಪಾಯಿಗೆ 200 ಕೇಳುತ್ತಿಯಲ್ಲ…? ಸರ್ಕಾರ ದರ ನಿಗದಿ ಮಾಡಿರುವುದು ಯಾಕೆ…?ಯಾಕ್ರಯ್ಯಾ.. ಈ ರೀತಿ ಅಮಾಯಕರನ್ನು ಸುಲಿಗೆ ಮಾಡ್ತೀರೀ… ನಡಿ ಪೆÇಲೀಸ್ ಸ್ಟೇಷನ್‍ಗೆ ಕಂಪ್ಲೆಂಟ್ ಮಾಡ್ತೀನಿ..

ಚಾಲಕ- ಸ್ವಲ್ಪವೂ ವಿಚಲಿತನಾಗದೆ ತಣ್ಣಗೆ ಹೇಳಿದ… ಸಾರ್..ನನ್ನ ಆಟೋ, ನನ್ನ ಬಂಡವಾಳ. ನಾವು ಮಾಡುವ ಸೇವೆಗೆ ದರ ನಿಗದಿ ಮಾಡಲು ಅವರ್ಯಾರು..? ವೈದ್ಯ- ಏನೋ… ಎಷ್ಟೋ ದುರಹಂಕಾರ ನಿನಗೆ… ಸರ್ಕಾರವನ್ನೇ ಪ್ರಶ್ನೆ ಮಾಡ್ತೀಯಾ…? ಸರ್ಕಾರ ದರ ನಿಗದಿ ಅಂತ ಮಾಡದೇ ಇದ್ದಿದ್ರೆ ಜನರನ್ನು ಅದೆಷ್ಟೋ ಸುಲಿಗೆ ಮಾಡುತ್ತಿದ್ದರೇನೋ…? ಈ ಆಟೋದವರೇ ಹೀಗೆ.

ಚಾಲಕ- ಅಲ್ಲ ಸಾರ್… ಆಟೋ ಚಾಲಕರು ಮಾತಾಡಿದ್ರೆ ದುರಹಂಕಾರ ಅಂತೀರೀ… ಈಗ ಖಾಸಗಿ ಡಾಕ್ಟರ್‍ಗಳು ಕೂಡ ಮಾಡ್ತಿರೋದು ಇದನ್ನೇ ಅಲ್ವಾ..? ಆದರೆ ನೀವು ಮಾಡೋ ಸೇವೆಗೆ ದರ ನಿಗದಿ ಯಾಕೆ ಎಂದು ಕೇಳ್ತೀರೀ.. ನೀವು ಮಾಡೋ ಕೆಲಸಕ್ಕೂ ದರ ಫಿಕ್ಸ್ ಮಾಡ್ಲೇಬೇಕಲ್ವಾ..  ಚಾಲಕನ ಉತ್ತರದಿಂದ ತಬ್ಬಿಬ್ಬಾದ ವೈದ್ಯ ತಲೆ ತಗ್ಗಿಸಿ ನಿಂತ…  ಒಬ್ಬ ವೈದ್ಯನಿಗಾದರೂ ಬುದ್ದಿ ಕಲಿಸಿದೆನಲ್ಲಾ ಎಂಬ ತೃಪ್ತಿಯೊಂದಿಗೆ, ವೈದ್ಯನಿಗೆ 200 ರೂ. ವಾಪಾಸ್ ಕೊಟ್ಟು ಬರ್ರ್ ಅಂತ ಹೋಗಿಯೇಬಿಟ್ಟ…..

Facebook Comments

Sri Raghav

Admin