ವೈರಿಯ ಮೇಲೆ ಗ್ರೆನೇಡ್ ಎಸೆಯುವ ಡ್ರೋಣ್, ಗುಂಡು ಹಾರಿಸುವ ರೋಬೋ..!

ಈ ಸುದ್ದಿಯನ್ನು ಶೇರ್ ಮಾಡಿ

dron

ನವದೆಹಲಿ, ಫೆ.19-ಗ್ರೆನೇಡ್ ಎಸೆಯುವ ಡ್ರೋಣ್ ಮತ್ತು ಮಾನವರಹಿತ ವೈಮಾನಿಕ ವಾಹನಗಳು, 20 ಮೀ. ದಪ್ಪ ಗೋಡೆ ಮೂಲಕ ಆಚೆಗಿನ ದೃಶ್ಯ ವೀಕ್ಷಣೆ ಸಾಮಥ್ರ್ಯದ 3-ಡಿ ರೇಡಾರ್, ಮತ್ತು ಗುರಿತಪ್ಪದೇ ಪಿಸ್ತೂಲ್‍ನಿಂದ ಗುಂಡು ಹಾರಿಸುವ ರೋಬೋ-ಇವು ಭಯೋತ್ಪಾದನೆ ನಿಗ್ರಹಕ್ಕಾಗಿ ಹೋರಾಡುತ್ತಿರುವ ರಾಷ್ಟ್ರೀಯ ಭದ್ರತಾ ಪಡೆ (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್-ಎನ್‍ಎಸ್‍ಜಿ) ಬಲವರ್ಧನೆಗಾಗಿ ಬತ್ತಳಿಕೆಗೆ ಸೇರ್ಪಡೆಯಾಗಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.ತಂತ್ರಜ್ಞಾನಕ್ಕೆ  ಸರಿಸಮನಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದುತ್ತಾ ಬಲವೃದ್ಧಿಸಿಕೊಳ್ಳುತ್ತಿರುವ ಭಯೋತ್ಪಾದಕರನ್ನು ಸದೆಬಡಿಯಲು ಎನ್‍ಎಸ್‍ಜಿ ಕಮಾಂಡೋಗಳಿಗೆ ಈ ಅತ್ಯಾಧುನಿಕ ಶಸ್ತಾಸ್ತ್ರಗಳು ವರದಾನವಾಗಲಿವೆ. ಭಯೋತ್ಪಾದಕರ ದಾಳಿಗಳ ನಿಗ್ರಹ ಹಾಗೂ ನಗರ ಪ್ರದೇಶಗಳಲ್ಲಿನ ಗುಪ್ತ ಸ್ಥಳಗಳಿಂದ ಒತ್ತೆಯಾಳುಗಳ ವಿಮೋಚನೆ ಕಾರ್ಯಾಚರಣೆಗಳಲ್ಲಿ ಅನುಭವ ಹೊಂದಿರುವ ಎನ್‍ಎಸ್‍ಜಿಗೆ ಈಗ ಸೂಕ್ಷ್ಮ ಮತ್ತು ನಿಖರ ಶಸ್ತ್ರಾಸ್ತ್ರಗಳು ಸೇರ್ಪಡೆಯಾಗಿದ್ದು, ಆನೆಬಲ ಬಂದಂತಾಗಿದೆ. ಅಮೆರಿಕದಂಥ ಮುಂದುವರಿದ ದೇಶಗಳಲ್ಲಿ ವಿಶೇಷ ಪಡೆಗಳು ಮತ್ತು ಸ್ವಾಟ್ ತಂಡಗಳು ಇಂಥ ಅತ್ಯಾಧುನಿಕ ಸಾಧನಗಳು ಬಳಸುತ್ತಿವೆ. ಈಗ ಈ ಸಾಲಿಗೆ ಭಾರತವೂ ಸೇರ್ಪಡೆಯಾಗಿರುವುದು ಉಗ್ರರ ದಮನ ಕಾರ್ಯಾಚರಣೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin