ವೈರಿ ದಾಳಿಯನ್ನು ಮಾರ್ಗ ಮಧ್ಯದಲ್ಲೇ ಉಡಾಯಿಸಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

Missile--01

ಬಾಲಸೋರ್ (ಒಡಿಶಾ), ಫೆ.11-ವೈರಿಗಳ ಶಸ್ತ್ರಾಸ್ತ್ರಗಳನ್ನು ಮಾರ್ಗ ಮಧ್ಯದಲ್ಲೇ ಧ್ವಂಸಗೊಳಿಸುವ ಇಂಟರ್‍ಸೆಪ್ಟರ್ ಕ್ಷಿಪಣಿಯನ್ನು ಇಂದು ಭಾರತ ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದೆ. ಇದರೊಂದಿಗೆ ಎರಡು ಪದರ ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಅಭಿವೃದ್ದಿಯ ದಿಕ್ಕಿನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.   ಅಬ್ದುಲ್ ಕಲಾಂ ದ್ವೀಪದಲ್ಲಿ (ವ್ಹೀಲರ್ ಐಲ್ಯಾಂಡ್) ಇಂದು ಬೆಳಗ್ಗೆ 7.45ರಲ್ಲಿ ಈ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‍ಡಿಒ) ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin