ವೊಡಾಫೋನ್ ಗ್ರಾಹಕರಿಗೆ ಸಿಹಿಸುದ್ದಿ

ಈ ಸುದ್ದಿಯನ್ನು ಶೇರ್ ಮಾಡಿ

Vodafone-01ಮುಂಬೈ. ಅ.22 : ನಾನಾ ಆಫರ್ ಗಳನ್ನೂ ಹೊತ್ತು ರಿಲಾಯನ್ಸ್ ಜಿಯೊ ಮಾರುಕಟ್ಟೆಗೆ ಬಂದಿದ್ದೆ ತಡ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇತರೆ ಟೆಲಿಕಾಂ ಸಂಸ್ಥೆಗಳು ತಾವೂ ಆಫರ್ ನೀಡಲು ಪ್ರಾರಂಭಿಸಿವೆ. ಈ ಸಾಲಿಗೆ ಈಗ ವೊಡಾಫೋನ್ ಸೇರಿಕೊಂಡಿದ್ದು ತನ್ನ ಗ್ರಾಹಕರಿಗೆ ಒಳ ಬರುವ ಕರೆಗಳಿಗೆ ಉಚಿತ ರೋಮಿಂಗ್ ಆಫರ್ ನ್ನು ಘೋಷಿಸಿದೆ.  ದೀಪಾವಳಿ ಹಬ್ಬದ ಪ್ರಯುಕ್ತ ವೋಡಾಪೋನ್ ಕಂಪನಿ ತನ್ನ 200 ಮಿಲಿಯನ್ ಗ್ರಾಹಕರಿಗೆ ರಾಷ್ಟ್ರೀಯ ಒಳಬರುವ ಕರೆಗಳ ಮೇಲೆ ಉಚಿತ ಕೊಡುಗೆಯನ್ನು ಒದಗಿಸುತ್ತಿದೆ. ಗ್ರಾಹಕರು ದೇಶದ ಯಾವುದೇ ನಗರಗಳಿಗೂ ಪ್ರಯಾಣ ಮಾಡುವಾಗ ರೋಮಿಂಗ್ ಗಾಗಿ ಹಣ ಕಡಿತವಾಗದೇ ಉಚಿತವಾಗಿ ರೋಮಿಂಗ್ ಕರೆಗಳನ್ನು ಅನುಭವಿಸುವಂತಾಗಲಿ ಎಂದು ಈ ಸೇವೆಯನ್ನು ಒದಗಿಸಲು ಮುಂದಾಗಿದೆ.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin