ವೋಟ್ ಬ್ಯಾಂಕ್ಗಾಗಿ ಮುಗ್ಧ ಯುವಕರನ್ನು ಬಲಿ ಕೊಡಬೇಡಿ
ತರೀಕೆರೆ,ಆ.18- ರಾಷ್ಟ್ರ ಪ್ರೇಮದ ಬಗ್ಗೆ ಧ್ವನಿ ಎತ್ತಿದ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಟಿ ಚಾರ್ಚ್, ಯುವತಿಯರ ಮೇಲೆ ದೌರ್ಜನ್ಯ ಮಾಡಿದ ಪೊ ಲೀಸ್ ಅಧಿಕಾರಿಗಳು ಮತ್ತು ಸರ್ಕಾರದ ಬಗ್ಗೆ ಸಂಸದೆ ಶೋಭ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರದ ವಿರುದ್ಧ ಬೊಬ್ಬೆ ಹೊಡೆಯುವ ಯುವಕರು 60 ಡಿಗ್ರಿ ಸೆಂಟಿಗ್ರೇಡ್ ತಾಪಮಾನವಿರುವ ಸ್ಥಳದಲ್ಲಿ ನಮ್ಮ ಸೈನಿಕರು ದೇಶವನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಾಪಾಡುತ್ತಿರುವುದನ್ನು ಒಮ್ಮೆ ನೋಡಿದರೆ ದೇಶ ದ್ರೋಹಿ ಧ್ವನಿ ಅವರ ಬಾಯಲ್ಲಿ ಬರುವುದಿಲ್ಲ ಎಂದರು. ಬೆಂಗಳೂರಿನ ಆಮ್ನೆಷ್ಟಿ ವಿದ್ಯಾಸಂಸ್ಥೆ ರಾಷ್ಟ್ರ ವಿರೋಧಿ ಹೇಳಿಕೆಗಳಿಗೆ ವೇದಿಕೆಯಾಗಿರುವುದು ಅತ್ಯಂತ ದುರದೃಷ್ಟಕರ, ರಾಜ್ಯ ಸರ್ಕಾರ ಇಂತಹ ಅವಹೇಳನಕಾರಿ ದೇಶ ವಿರೋಧಿ ಪ್ರಚೋದನೆಗಳನ್ನು ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಹಿಸಿದರು. ಮಾಜಿ ರಾಜ್ಯಸಭಾ ಸದಸ್ಯ ಆಯನೂರ್ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ನಿಷ್ಕ್ರೀಯವಾಗಿದೆ ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಮಳೆ ತೃಪ್ತಿಕರವಾಗಿಲ್ಲ. ಬರದ ಬಗ್ಗೆ ಸರ್ಕಾರ ಸರಿಯಾದ ನಿರ್ವಾಹಣಾ ರೋಡ್ ಮ್ಯಾಪ್ ಮಾಡಿಲ್ಲ. 1480 ಕೋಟಿ ರೂ ಕೇಂದ್ರ ಸರ್ಕಾರ ರೈತರಿಗೆ ತಲುಪುವಂತೆ ಯೋಜನೆ ರೂಪಿಸಿದರೂ ಅವರಿಗೆ ತಲುಪಿಲ್ಲ ಎಂದು ವಿಷಾದಿಸಿದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ತಾಲ್ಲೂಕು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ಪಿ. ಆನಂದಪ್ಪ ರವರಿಗೆ ಜವಾಬ್ದಾರಿ ಹೆಚ್ಚಿದೆ. ಪಕ್ಷ ಬಿಟ್ಟು ಹೋದವರನ್ನು ಮತ್ತು ಪಕ್ಷಕ್ಕೆ ಬರುವವರನ್ನು ಸೇರಿಸಿಕೊಂಡು 2018ರ ಚುನಾವಣೆಗೆ ಪಕ್ಷದ ಕಾರ್ಯಕರ್ತರ ವಿಶ್ವಾಸಗಳಿಸಿ ಪಕ್ಷವನ್ನು ಸದೃಢವಾಗಿ ಕಟ್ಟಬೇಕೆಂದು ತಿಳಿಸಿದರು.ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಎನ್. ಮಂಜುನಾಥ್ ಮಾತನಾಡಿ, ಪಕ್ಷ ಕಾರ್ಯಕರ್ತರ ಸ್ವತ್ತು ಅಧಿಕಾರವಿರಲಿ, ಇಲ್ಲದಿರಲಿ ಪಕ್ಷಕ್ಕೆ ಬದ್ದವಾಗಿರುವವರು ನಿರಂತರವಾಗಿ ಶ್ರಮಿಸುತ್ತಿರುತ್ತಾರೆ ಎಂದರು. ಜಿಲ್ಲಾ ಹಿಂದುಳಿದ ವರ್ಗಗಳ ಗೋಪಿಕೃಷ್ಣ ಮಾತನಾಡಿ, ಪಕ್ಷ ಯಾರಿಗೆ 2018 ರ ಚುನಾವಣೆಯಲ್ಲಿ ಟಿಕೇಟ್ ನೀಡಿದರೂ ನಿಷ್ಠೆಯಿಂದ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಗೆಲುವಿಗೆ ಪಣ ತೊಟ್ಟು ದುಡಿಯುತ್ತೇನೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮ ಸಂಜೀವ್ ಕುಮಾರ್ ಮಾತನಾಡಿ, ಪಕ್ಷ ಅಧಿಕಾರ ನೀಡಿದೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಕ್ಷದ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆಡಳಿತವನ್ನು ಪಾರದರ್ಶಕವಾಗಿ ನಡೆಸುವಂತೆ ತಿಳಿಸಿದರು.
ನೂತನ ಅಧ್ಯಕ್ಷ ಎಸ್.ಪಿ.ಆನಂದಪ್ಪ ಮಾತನಾಡಿ, ಪಕ್ಷವನ್ನು ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲೂ ಗ್ರಾಮ ಮತ್ತು ಭೂತ್ ಮಟ್ಟದಲ್ಲಿ ಸಂಘಟಿಸಿ 2018 ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ವಿಶ್ವಾಸದ ಭರವಸೆ ನೀಡಿದರು. ವಿಧನ ಪರಿಷತ್ ಸದಸ್ಯ ಪ್ರಾಣೇಶ್, ಬಿಜೆಪಿ ನಾಯಕ ಅವಿನಾಷ್, ಮಾಜಿ ಅಧ್ಯಕ್ಷ ಬೋಜೆಗೌಡ, ಜಿ.ಪಂ ಸದಸ್ಯ ಕೆ.ಆರ್ ಆನಂದಪ್ಪ, ಜಿ.ಪಂ ಸದಸ್ಯ ಮಹೇಂದ್ರ, ಎಲ್ಲಾ ಬಿ.ಜೆ.ಪಿ. ತಾಲ್ಲೂಕು ಪಂಚಾಯಿತಿ ಸದಸ್ಯರುಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಮತ್ತು ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
► Follow us on – Facebook / Twitter / Google+