ವೋಟ್ ಮಾಡಿದ ಮಹಾಶೂರರಿಗೆ ಸನ್ಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

Vote--0011

ಮಡಿಕೇರಿ, ಮೇ 12-ಮತದಾರರನ್ನು ಮತಗಟ್ಟೆಗೆ ಸೆಳೆಯುವ ಉದ್ದೇಶದಿಂದ ವೋಟ್ ಮಾಡಿದವನೇ ಮಹಾಶೂರ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡಿಕೇರಿಯ ನಗರಸಭೆ ಹಮ್ಮಿಕೊಂಡಿತ್ತು. ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಎಲ್ಲರೂ ಪಾಲ್ಗೊಳ್ಳಬೇಕು ಎಂಬ ಅರಿವು ಮೂಡಿಸಲು ಈ ವಿನೂತನ ಪ್ರಯೋಗವನ್ನು ಮಡಿಕೇರಿಯ ಮತಗಟ್ಟೆ 219ರಲ್ಲಿ ನಡೆಸಲಾಯಿತು. ಮತಗಟ್ಟೆಗೆ ಬಂದು ಮತ ಚಲಾಯಿಸಿದ ನಂತರ ಆ ಮತದಾರರನ್ನು ಸಿಂಹಾಸನದ ಮೇಲೆ ಕೂರಿಸಿ ಪೇಟ ತೊಡಿಸಿ, ಶಾಲು ಹೊದಿಸಿ, ಹೂ ಗುಚ್ಛ ನೀಡಿ ಅಭಿನಂದಿಸಲಾಯಿತು.

Facebook Comments

Sri Raghav

Admin