ವ್ಯಕ್ತಿಯನ್ನು ತಿಂದು ಹಾಕಿದ ಮೊಸಳೆ

ಈ ಸುದ್ದಿಯನ್ನು ಶೇರ್ ಮಾಡಿ

Crocodile

ಬಾಗಲಕೋಟೆ, ಆ.17- ಕೃಷ್ಣಾ ನದಿಯಲ್ಲಿ ಕೈ-ಕಾಲು ತೊಳೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಮೊಸಳೆ ತಿಂದುಹಾಕಿರುವ ಘಟನೆ ನಡೆದಿದೆ.ಮೊಸಳೆಗೆ ಬಲಿಯಾದವ ತಾಲೂಕಿನ ನಾಯಿನೇಗಿಲು ಗ್ರಾಮದ ಕಲ್ಲಪ್ಪ (36) ಎಂದು ತಿಳಿದುಬಂದಿದೆ. ನದಿ ದಡದಲ್ಲಿ ವ್ಯಕ್ತಿಯ ದೇಹದ ಕೆಲ ತುಂಡುಗಳು  ಪತ್ತೆಯಾಗಿದ್ದು , ಗ್ರಾಮಸ್ಥರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ದಾವಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೊಸಳೆ ದಾಳಿಯಿಂದಲೇ ಈ ಘಟನೆ ನಡೆದಿರುವುದೆಂದು ಖಚಿತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin