ವ್ಯಾಟಿಕನ್’ನಲ್ಲಿ ನಾಳೆ ಮದರ್ ತೆರೆಸಾ ಅವರಿಗೆ ಸಂತ ಪದವಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

Mother

ವ್ಯಾಟಿಕನ್, ಸೆ.3-ನಾಲ್ಕು ದಶಕಗಳ ಕಾಲ ಬಡವರು ಮತ್ತು ರೋಗಿಗಳ ಸೇವೆ ಮಾಡುತ್ತಾ ವಿಶ್ವದ ಮನುಕುಲಕ್ಕೆ ಪ್ರೀತಿಯ ಸಂದೇಶ ಸಾರಿದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೆಸಾ ಅವರಿಗೆ ನಾಳೆ ಇಲ್ಲಿ ಸಂತ ಪದವಿ ಪ್ರದಾನ ಮಾಡಲಾಗುತ್ತದೆ.   ವ್ಯಾಟಿಕನ್ ಚರ್ಚ್ನಲ್ಲಿ ತೆರೆಸಾ ಅವರ 19ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಫ್ರಾನ್ಸಿಸ್ ಅವರು ಮದರ್ಗೆ ಈ ಪದವಿ ಪ್ರದಾನ ಮಾಡಲಿದ್ದಾರೆ. ವಿದೇಶಿ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಟಲಿಗೆ ತೆರಳಿ ನಾಳೆ ವ್ಯಾಟಿಕನ್ನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸರ್ವರಿಗೂ ನಿಸ್ವಾರ್ಥ ಸೇವೆ ನೀಡಿದ ತೆರೆಸಾರನ್ನು 20ನೇ ಶತಮಾನದ ಕ್ರೈಸ್ತಧರ್ಮದ ಪೂಜನೀಯ ಸಂತರು ಎಂದು ಘೋಷಿಸಲಾಗುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin