ಶಂಕಾಸ್ಪದ ಬ್ಯಾಗ್ ಪತ್ತೆ : ಪಠಾಣ್‍ಕೋಟ್ ಸೇನಾ ನೆಲೆಯಲ್ಲಿ ಹೈ ಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Pathankot--01

ಪಠಾಣ್‍ಕೋಟ್, ಮೇ 29-ಉಗ್ರಗಾಮಿಗಳ ಕಾಕದೃಷ್ಟಿಗೆ ಸದಾ ಗುರಿಯಾಗುತ್ತಿರುವ ಪಂಜಾಬ್‍ನ ಪಠಾಣ್ ಕೋಟ್ ಸೇನೆ ನೆಲೆಯಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಾಮುಮ್ ಆರ್ಮಿ ಕಂಟೋನ್ಮೆಂಟ್ (ಸೇನಾ ದಂಡು ಪ್ರದೇಶ) ಬಳಿ ಅನುಮಾನಾಸ್ಪದ ಚೀಲವೊಂದು ಪತ್ತೆಯಾಗಿದ್ದು, ಪಠಾಣ್‍ಕೋಟ್‍ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.ಈ ಪ್ರದೇಶಕ್ಕೆ ನುಸುಳಿರಬಹುದಾದ ಉಗ್ರರಿಗಾಗಿ ಶೋಧ ಮುಂದುವರೆದಿದೆ.ಶೋಧ ಕಾರ್ಯಾಚರಣೆ ವೇಳೆ ಬ್ಯಾಗೊಂದು ಕಂಡ ಬಂದಿದ್ದು, ಅದನ್ನು ಪರಿಶೀಲಿಸಲಾಗಿ ಅದರಲ್ಲಿ ಮೂರು ಸೇನಾ ಸಮವಸ್ತ್ರಗಳು ಪತ್ತೆಯಾದವು. ಯೂನಿಫಾರಂಗಳ ಮೇಲೆ ಜಮ್ಮು ಎಂಬ ಅಕ್ಷರ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಣಿ ಚೀಲದಲ್ಲಿ ಇದ್ದ ಬ್ಯಾಗ್‍ನಲ್ಲಿ ಉಗ್ರರು ಧರಿಸುವ ಸೇನಾ ಸಮವಸ್ತ್ರದಂಥ ಉಡುಪುಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ 20ಕ್ಕೂ ಹೆಚ್ಚು ಉಗ್ರರು ನುಸುಳಿರುವ ಬಗ್ಗೆ ಗುಪ್ತಚರ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಮೇ 4 ರಂದು ಇದೇ ಸೇನಾ ನೆಲೆ ಬಳಿ ಎರಡು ಬ್ಯಾಗ್‍ಗಳು ಪತ್ತೆಯಾಗಿದ್ದವು. ಕಳೆದ ವರ್ಷ ಜನವರಿಯಲ್ಲಿ ಪಠಾಣ್‍ಕೋಟ್ ವಾಯು ನೆಲೆ ಮೇಲೆ ಉಗ್ರರು ದಾಳಿ ನಡೆಸಿ ಏಳು ಯೋಧರನ್ನು ಕೊಂದಿದ್ದರು. ಈ ಆಕ್ರಮಣದಲ್ಲಿ ಇತರ 27 ಮಂದಿ ತೀವ್ರ ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin