ಶರಣ ಜ್ಯೋತಿ ಯಾತ್ರೆಯ ಪೂರ್ವಭಾವಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

3

ಮುದ್ದೇಬಿಹಾಳ,ಮಾ.13- ಶರಣ ಜ್ಯೋತಿ ಯಾತ್ರೆ ಸಂಚಾರ ತಾಲೂಕಿನ ತಂಗಡಗಿಯಲ್ಲಿ ಇದೇ 19ರಂದು ಜರುಗಲಿರುವ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಇದೇ 14ರಿಂದ 17ರವರೆಗೆ ತಾಲೂಕಿನಲ್ಲಿ ಕೈಗೊಳ್ಳಲಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ನಾಲತವಾಡ ಹೇಳಿದರು.ಪಟ್ಟಣದ ಗಣಿತ ಲೋಕ ಟ್ಯೂಷನ್ ಕ್ಲಾಸಸ್‍ನ ಸಭಾಭವನದಲ್ಲಿ ನಿನ್ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷ ತಾಳಿಕೋಟಿಯ ನಿವೃತ್ತ ಪ್ರಾಚಾರ್ಯ ಡಿ.ಎಂ. ಧನ್ನೂರ ಅಧ್ಯಕ್ಷತೆ ವಹಿಸಲಿದ್ದು, ಕೂಡಲಸಂಗಮದ ಪಂಚಮಸಾಲಿ ಬಸವಜಯ ಮೃತ್ಯುಂಜಯ ಶ್ರೀಗಳು, ಬಿಲ್ ಕೆರೂರಿನ ಸಿದ್ಧಲಿಂಗ ಶಿವಾಚಾರ್ಯರು, ಮಾನ್ವಿಯ ಬಸವಪ್ರಸಾದ ಶರಣರು, ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು, ಅಥಣಿ-ಆನವಾಡದ ಮಲ್ಲಿಕಾರ್ಜುನ ಶ್ರೀಗಳು, ಬಸವಕಲ್ಯಾಣದ ಶಿವಶರಣೆ ಸತ್ಯಕ್ಕನವರು, ಚಿಗರಹಳ್ಳಿಯ ಸಿದ್ದಬಸವ ಕಬಿರಾನಂದ ಶ್ರೀಗಳು, ಮಧುರಖಂಡಿಯ ಡಾ. ಈಶ್ವರ ಮಂಟೂರ, ಮನಗೂಳಿಯ ಶ್ರೀಭೃಂಗೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.

ಶರಣರ ವಿಚಾರಧಾರೆಗಳು ಸರ್ವಕಾಲಿಕ ಸತ್ಯವಾಗಿದ್ದು, ಶರಣರ ಜೀವನ ಸಾಧನೆಯನ್ನು ಎಲ್ಲರ ಮನೆ ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಹಮ್ಮಿಕೊಂಡಿದ್ದು ಅದರ ಪೂರ್ವಭಾವಿಯಾಗಿ ಶರಣ ಜ್ಯೋತಿ ಯಾತ್ರೆ ನಡೆಸಲಾಗುವುದು. ಸಮ್ಮೇಳನದಲ್ಲಿ ಎರಡು ಗೋಷ್ಠಿಗಳಿದ್ದು, ಇದೇ ವೇಳೆ ದಾನಿಗಳ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಂಗಡಗಿಯ ಸಮಸ್ತ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ ಎಂದರು.ಇದೇ 14ರಂದು ಅಮರಗೋಳದಿಂದ ಆರಂಭಗೊಂಡು ಮದರಿ, ಆಲೂರ, ನಾಲತವಾಡ, ಅ. ಸೋಮನಾಳ, ಶಿವಪುರ, ಮೂಕಿಹಾಳ, ಹಡಗಿನಾಳ, ತಾಳಿಕೋಟಿ, ಮಿಣಜಗಿ, ಬಳಗಾನೂರ, ಲಿಂಗದಳ್ಳಿ, ಮಡಿಕೇಶ್ವರ, ಢವಳಗಿ, ಬಸರಕೋಡ, ಸಿದ್ದಾಪೂರ, ಹುಲ್ಲೂರ, ಬಳಬಟ್ಟಿ, ಯಲಗೂರ, ಕಾಳಗಿ, ಹುಲ್ಲೂರ ಎಲ್‍ಟಿ, ಯರಝರಿ, ಹಂಡರಗಲ್, ಮುದ್ದೇಬಿಹಾಳ, ನೇಬಗೇರಿ, ಗಂಗೂರ, ಕಮಲದಿನ್ನಿ, ಕುಂಚಗನೂರ, ತಂಗಡಗಿಯಲ್ಲಿ ಜ್ಯೋತಿ ಯಾತ್ರೆ ಇದೇ 17ರಂದು ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಬಿ. ಬಂಗಾರಿ, ಬಾಪುಗೌಡ ಪಾಟೀಲ, ಎಸ್.ಎಸ್. ಕರಡ್ಡಿ, ಪ್ರಭು ಕಡಿ, ಸಿ.ಜಿ. ನಾಗರಾಳ, ಮುದಕಪ್ಪಗೌಡ ಪಾಟೀಲ, ಸಿದ್ರಾಮಪ್ಪ ಡೊಂಗರಗಾವಿ, ಸಿದ್ದಣ್ಣ ಸಜ್ಜನ, ಚರಲಿಂಗಪ್ಪ ಬಿದರಕುಂದಿ, ಚಂದ್ರಶೇಖರ ಇಟಗಿ, ಮಹಾಂತೇಶ ಬೂದಿಹಾಳಮಠ, ಆರ್.ಜಿ. ಮೋಟಗಿ, ಎಸ್.ಎಸ್. ಪೂಜಾರಿ, ಬಿ.ಎಸ್. ರೂಢಗಿ, ಆರ್.ಬಿ. ಲಿಂಗದಳ್ಳಿ, ಸಿದ್ದನಗೌಡ ಬಿಜ್ಜೂರ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin