ಶವದ ಸೊಂಟದ ಮೂಳೆ ಮುರಿದು ಹೆಗಲ ಮೇಲೆ ಹೊತ್ತು ಸಾಗಿಸಿದರು..!

ಈ ಸುದ್ದಿಯನ್ನು ಶೇರ್ ಮಾಡಿ

Women

ಬಾಲಸೋರ್, ಆ.26-ಅತ್ತು ಕರೆದರೂ ವಾಹನ ಲಭಿಸದ ಕಾರಣ, ತನ್ನ ಪತ್ನಿಯ ಶವವನ್ನು ಹೆಗಲ ಮೇಲೆಯೇ ಹೊತ್ತು ವ್ಯಕ್ತಿಯೊಬ್ಬ 10 ಕಿ.ಮೀ. ನಡೆದ ಮನಕಲಕುವ ಘಟನೆ ಬೆನ್ನಲ್ಲೇ ಅದೇ ರೀತಿಯ ಇನ್ನೊಂದು ಪ್ರಕರಣವೂ ಒಡಿಸ್ಸಾದಲ್ಲಿ ನಿನ್ನೆ ನಡೆದಿದೆ. ಪೌರಕಾರ್ಮಿಕರು ಶವವನ್ನು ಸಾಗಿಸಲು ಅನುಕೂಲವಾಗುವಂತೆ ಕಾಲಿನಿಂದ ಹೆಣದ ಸೊಂಟ, ಮೂಳೆಗಳನ್ನು ಮುರಿದು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಬಿದುರಿಗೆ ಕಟ್ಟಿ ರಸ್ತೆಯಲ್ಲಿ ಕೊಂಡೊಯ್ದ ಸಂಗತಿ ಬೆಳಕಿಗೆ ಬಂದಿದೆ.  ಸಲಾಮನಿ ಬಾರಿಕ್ ಎಂಬ 76ವರ್ಷದ ವೃದ್ಧೆ ಬುಧವಾರ ರೈಲಿಗೆ ಸಿಕ್ಕಿ ಮೃತಪಟ್ಟರು. ಒಡಿಶಾದ ಬಾಲಸೋರ್ ಜಿಲ್ಲೆಯ ಸೊರೊ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕೆಯ ಶವ ಗಂಟೆಗಟ್ಟಲೆ ಅನಾಥವಾಗಿ ಬಿದ್ದಿತ್ತು. ಸೊರೊದಲ್ಲಿ ಮರಣೋತ್ತರ ಪರೀಕ್ಷೆ ಸೌಲಭ್ಯಗಳು ಇಲ್ಲದ ಕಾರಣ ಶವವನ್ನು ಅಲ್ಲಿಂದ 30 ಕಿ.ಮೀ. ದೂರದಲ್ಲಿರುವ ನಗರಕ್ಕೆ ಕೊಂಡೊಯ್ಯಬೇಕಾಗಿತ್ತು.

ರೈಲ್ವೆ ಪೊಲೀಸರು ರೈಲಿನಲ್ಲಿ ಶವ ಸಾಗಿಸಲು ನಿರ್ಧರಿಸಿದರು. ಆದರೆ, ಆಂಬುಲೆನ್ಸ್ ಇರಲಿಲ್ಲ. ಆಟೋದಲ್ಲಿ ರವಾನಿಸಲು ದುಬಾರಿ ವೆಚ್ಚ ತೆರಬೇಕಾಗಿತ್ತು. ಹೀಗಾಗಿ ಪೊಲೀಸರು 2 ಕಿ.ಮೀ. ದೂರದಲ್ಲಿರುವ ರೈಲು ನಿಲ್ದಾಣಕ್ಕೆ ಶವ ಸಾಗಿಸಲು ಓರ್ವ ಪೌರಕಾರ್ಮಿಕನ ನೆರವು ಪಡೆದರು. ಅಷ್ಟು ಹೊತ್ತಿಗಾಗಲೇ ಶವ ಸೆಟೆದುಕೊಂಡು ಗಟ್ಟಿಯಾಗಿತ್ತು. ಹೆಣವನ್ನು ಸಾಗಿಸಲು ಅನುಕೂಲವಾಗುವಂತೆ ನೌಕರರಿಬ್ಬರು ಶವದ ಸೊಂಟ ಮತ್ತು ಮೂಳೆಗಳನ್ನು ಮುರಿದು ಪ್ಲಾಸ್ಟಿಕ್ ಚೀಲದಲ್ಲಿ ತುರುಕಿ ಬೊಂಬಿಗೆ ಕಟ್ಟಿ 2 ಕಿ.ಮೀ. ದೂರದ ರಸ್ತೆಯಲ್ಲೇ ಕೊಂಡೊಯ್ದರು. ಈ ಘಟನೆ ಬಗ್ಗೆ ಆಕೆಯ ಅಸಹಾಯಕ ಮಗ ರವೀಂದ್ರ ಬಾರಿಕ್ ನೊಂದಿದ್ದಾನೆ.  ಒಡಿಶಾ ಮಾನವ ಹಕ್ಕುಗಳ ಆಯೋಗ ಈ ಘಟನೆ ಬಗ್ಗೆ ರೈಲ್ವೆ ಪೊಲೀಸ್ ಮತ್ತು ಬಾಲಸೋರ್ ಜಿಲ್ಲಾಡಳಿತದ ವಿವರಣೆ ಕೇಳಿದೆ.

► Follow us on –  Facebook / Twitter  / Google+

Facebook Comments

Sri Raghav

Admin