ಶವವಿರುವ ಸ್ಥಳ ಗುರುತಿಸಿದ ಎನ್‍ಡಿಆರ್‍ಎಫ್ ತಂಡ : ಹೊರತೆಗೆಯಲು ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

Mastigudi-01

ಬೆಂಗಳೂರು, ನ.9-ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಜಿಗಿದು ಸಾವಗೀಡಾಗಿರುವ ಸಾಹಕ ಕಲಾವಿದರಾದ ಅನಿಲ್ ಮತ್ತು ಉದಯ್‍ರ ಪಾರ್ಥೀವ ಶರೀರಗಳನ್ನು ನೀರಿನಿಂದ ಹೊರತೆಗೆಯಲು ಹರಸಾಹಸ ಮಾಡಲಾಯಿತು. ಕಳೆದ ಎರಡು ದಿನಗಳಿಂದ ನಿರಂತರ ಹುಡುಕಾಟ ನಡೆಸಿ ಕೊನೆಗೆ ಕಳೆದ ರಾತ್ರಿ ಶವವಿರುವ ಸ್ಥಳವನ್ನು ಗುರುತಿಸುವಲ್ಲಿ ಎನ್‍ಡಿಆರ್‍ಎಫ್ ತಂಡ ಯಶಸ್ವಿಯಾಗಿದ್ದು, ಶವಗಳನ್ನು ಹೊರತೆಗೆಯಲು ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.  ಇಂದು ಬೆಳಗಿನಿಂದಲೇ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಕೆಸರಿನಲ್ಲಿ ಸಿಲುಕಿರುವ ಶವಗಳನ್ನು ಹೊರತೆಗೆಯುವುದು ಒಂದೇ ಸಾಹಸವೇ ಆಗಿದೆ. ಹಗ್ಗದ ಸಹಾಯದಿಂದ ನೀರಿಗಿಳಿದು ನುರಿತ ಈಜುಗಾರರು ಮೂರ್ನಾಲ್ಕು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ನೀರಿಗಿಳಿದರೆ ಕೆಸರಿನಲ್ಲಿ ತಾವೂ ಸಿಲುಕಿಕೊಳ್ಳುವ ಆತಂಕವಿರುವುದರಿಂದ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಕೆರೆ ದಂಡೆ ಮೇಲೆ ಬೀಡುಬಿಟ್ಟಿರುವ ವೈದ್ಯರ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ. ಇಂದು ಶವಗಳನ್ನು ಹೊರ ತೆಗೆದೇ ತೆಗೆಯುತ್ತೇವೆ. ಇದಕ್ಕೂ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಡುವೆ ಇಂದೂ ಕೂಡ ಹಿರಿಯ ಕಲಾವಿದರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು ಘಟನಾಸ್ಥಳಕ್ಕೆ ಆಗಮಿಸಿ ಮೃತ ಪಟ್ಟ ಕಲಾವಿದರಿಗೆ ಕಂಬನಿ ಮಿಡಿದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin