ಶಶಿಕಲಾ ಪಕ್ಕದ ಸೆಲ್’ನಲ್ಲಿದ್ದ ಸೈನೇಡ್ ಮಲ್ಲಿಕಾ ಹಿಂಡಲಗಾ ಜೈಲಿಗೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Sasikala--Jail--01

ಬೆಂಗಳೂರು , ಫೆ.21-ಖೈದಿ ಸೈನೇಡ್ ಮಲ್ಲಿಕಾಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.  ಈಗಾಗಲೇ ಪರಪ್ಪನ ಅಗ್ರಹಾರ ಕಾರಾಗೃಹದ ಸುತ್ತಮುತ್ತ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಖೈದಿಗಳನ್ನು ಮತ್ತು ವಿಚಾರಣಾಧೀನ ಖೈದಿಗಳನ್ನು ನೋಡಲು ಬರುವವರನ್ನು ತೀವ್ರ ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ. ಇನ್ನು ಜೈಲಿಗೆ ಬರುವಂತಹ (ತರಕಾರಿ, ಹಾಲು, ದವಸ ಧಾನ್ಯಗಳ ವಾಹನಗಳು) ವಾಹನಗಳನ್ನು ಸ್ಕ್ಯಾನಿಂಗ್ ಮಾಡಿ ಒಳ ಬಿಡಲಾಗುತ್ತಿದೆ.

ಸರಣಿ ಹಂತಕಿ ಸೈನೇಡ್ ಮಲ್ಲಿಕಾ(ಕೆಂಪಮ್ಮ) ಇದ್ದ ಸೆಲ್ ಪಕ್ಕದ ಸೆಲ್‍ನಲ್ಲೇ ಇದ್ದ ಶಶಿಕಲಾ ಮತ್ತು ಇಳವರಸಿ ಅವರನ್ನು ಇರಿಸಲಾಗಿತ್ತು. ಆದರೆ ನಟೋರಿಯಸ್ ಕ್ರಿಮಿನಲ್ ಪಕ್ಕದ ಸೆಲ್‍ನಲ್ಲಿರಿಸಿರುವುದು ಸರಿಯಲ್ಲ ಎಂದು ತಮಿಳುನಾಡಿನ ಕೆಲ ಎಐಎಡಿಎಂಕೆ ಶಾಸಕರು, ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದೆರಡು ದಿನಗಳ ಹಿಂದೆಯೇ ಮಲ್ಲಿಕಾಳನ್ನು ಶಿಫ್ಟ್ ಮಾಡಲಾಗಿದೆ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin