ಶಸ್ತ್ರಾಸ್ತ್ರ ಹಿಡಿದು ಅನುಮಾನಾಸ್ಪದವಾಗಿ ಓಡಾಡಿದ ವ್ಯಕ್ತಿಗಳು : ಮುಂಬೈನಲ್ಲಿ ಹೈಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

High-alert

ಮುಂಬೈ,ಸೆ.22-ಮುಂಬೈ ಕಡಲ ತೀರದಲ್ಲಿ ಕಪ್ಪು ಬಟ್ಟೆ ಧರಿಸಿ ಸಶಸ್ತ್ರ ಹಿಡಿದ ಇಬ್ಬರು ವ್ಯಕ್ತಿಗಳು ಓಡಾಡುತ್ತಿದ್ದರು ಎಂದು ಶಾಲಾ ಮಕ್ಕಳು ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.   2011ರ ಮುಂಬೈ ದಾಳಿ ವೇಳೆ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಸಮುದ್ರದ ಮೂಲಕ ನವೀ ಮುಂಬೈ ಬಂದರು ಭಾರತದೊಳಗೆ ನುಗ್ಗಿ ದುಷ್ಕøತ್ಯ ನಡೆಸಿದ್ದರು.
ಪ್ರಸ್ತುತ ಜಮ್ಮುಕಾಶ್ಮೀರದ ಉರಿಯಲ್ಲಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದಾಗಿನಿಂದ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಯುದ್ಧ ನಡೆದಿರಬಹುದೆಂಬ ಮಾತುಗಳು ಕೇಳಿಬರುತ್ತಿದೆ.

ಇದರ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ನೌಕಾಪಡೆಗೆ ಸೇರಿದ ಪ್ರದೇಶದಲ್ಲಿರುವ ಸಬ್‍ಮೆರಿನ್, ಹೆಲಿಕಾಪ್ಟರ್, ಸಶಸ್ತ್ರಗಳನ್ನು ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಹೈಲರ್ಟ್ ಘೋಷಿಸಿದೆ. ಇದರಿಂದಾಗಿ ಕಡಲ ತೀರದ ಪ್ರದೇಶಗಳಲ್ಲಿ ಸೇನಾ ಹೆಲಿಕಾಪ್ಟರ್‍ಗಳು ಕಾರ್ಯಾಚರಣೆಗಿಳಿದು ತಪಾಸಣೆ ಕಾರ್ಯಾಚರಣೆ ನಡೆಸುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin