ಶಸ್ತ್ರ ಪರವಾನಗಿಗೆ ಐಡಿ-ಯುಸಿಎಫ್ ಸಂಖ್ಯೆ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

S-Gun

ಬೆಂಗಳೂರು, ಆ.24-ನಗರ ಪೊಲೀಸ್ ಆಯುಕ್ತರ ಘಟಕದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಸ್ತ್ರ ಪರವಾನಗಿಗಳನ್ನು ಹೊಂದಿರುವ ಸಾರ್ವಜನಿಕರು, ಬ್ಯಾಂಕ್ಗಳು ಹಾಗೂ ಇತರೆ ಸಾರ್ವಜನಿಕರ ಸಂಸ್ಥೆ, ಉದ್ದಿಮೆಗಳು ಐಡಿ ಸಂಖ್ಯೆ ಮತ್ತು ಯುಸಿಎಫ್ ಸಂಖ್ಯೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಶಸ್ತ್ರ ಪರವಾನಗಿ ಪಡೆಯಲು ಆಯುಕ್ತರ ಕಚೇರಿಯಲ್ಲಿ ಎನ್ಡಿಎಎಲ್ ಸಾಫ್ಟ್ವೇರ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿದ್ದು, ಕಡ್ಡಾಯವಾಗಿ ಐಡಿ ಸಂಖ್ಯೆ ಮತ್ತು ಯುಸಿಎಫ್ ಸಂಖ್ಯೆಯನ್ನು ಪಡೆದುಕೊಳ್ಳಲು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಸ್ತ್ರ ಪರವಾನಗಿದಾರರು ಭಾರತ ಸರ್ಕಾರದ ಗೃಹ ಮಂತ್ರಾಲಯದ ಆದೇಶದನ್ವಯ ಸಂಖ್ಯೆಗಳನ್ನು ಅಳವಡಿಸಿಕೊಳ್ಳದ ಶಸ್ತ್ರ ಪರವಾನಗಿಗಳು ಅನುರ್ಜಿತಗೊಳ್ಳಲಿವೆ.

ಶಸ್ತ್ರ ಪರವಾನಗಿದಾರರು ತಮ್ಮ ಮೂಲ ಶಸ್ತ್ರ ಪರವಾನಗಿಯೊಂದಿಗೆ ಪೊಲೀಸ್ ಆಯುಕ್ತರ ಕಚೇರಿಯ ಶಸ್ತ್ರ ವಿಭಾಗಕ್ಕೆ 12 ದಿನಗಳೊಳಗಾಗಿ ವಿವರಗಳನ್ನು ಸಲ್ಲಿಸಿ ಐಡಿ ಮತ್ತು ಯುಸಿಎಫ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin