ಶಾಂತಕುಮಾರ್ ದೇಹಕ್ಕಾಗಿ ಮುಂದುವರೆದ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Shantakumar-Rain

ಬೆಂಗಳೂರು, ಮೇ 24-ಕಳೆದ ಶನಿವಾರ ನಗರದಲ್ಲಿ ಸುರಿದ ಭಾರೀ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಶಾಂತಕುಮಾರ್ ಅವರ ಶೋಧ ಕಾರ್ಯ ಇನ್ನೂ ಮುಂದುವರೆದಿದೆ.   ಮಹಾಲಕ್ಷ್ಮಿ ಲೇಔಟ್, ಕುರುಬರಹಳ್ಳಿ ಬಳಿಯ ರಾಜಕಾಲುವೆಗೆ ಬಿದ್ದು ಕೊಚ್ಚಿ ಹೋಗಿದ್ದ ಶಾಂತಕುಮಾರ್ ಅವರ ದೇಹಕ್ಕಾಗಿ ಅಗ್ನಿಶಾಮಕದಳ, ಎನ್‍ಡಿಆರ್‍ಎಫ್ ತಂಡ ಐದು ದಿನಗಳಿಂದಲೂ ನಿರಂತರ ಶೋಧ ನಡೆಸುತ್ತಿದ್ದರೂ ಇನ್ನೂ ಅವರ ದೇಹದ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.



ಇಂದೂ ಕೂಡ ಅಗ್ನಿಶಾಮಕ ದಳದ 40 ಸಿಬ್ಬಂದಿ, ಎನ್‍ಡಿಆರ್‍ಎಫ್‍ನ 20 ಸಿಬ್ಬಂದಿ ಕೆಂಗೇರಿಯಿಂದ ರಾಜರಾಜೇಶ್ವರಿನಗರದವರೆಗೆ ಶೋಧ ಕಾರ್ಯವನ್ನು ಮುಂದುವರೆಸಿದ್ದರು.  ಅವರು ಮಳೆಯ ನೀರಿನ ಚರಂಡಿಗೆ ಬಿದ್ದು ನಾಲ್ಕನೆ ದಿನ ಕಳೆದು ಐದನೇ ದಿನವಾಗಿದೆ. ಎಲ್ಲೆಡೆ ಹುಡುಕಾಟ ನಡೆಸಿದರೂ ಅವರ ದೇಹ ಪತ್ತೆಯಾಗಿಲ್ಲ.  ಶೋಧ ಕಾರ್ಯಾಚರಣೆ ವೇಳೆ ಎರಡು ದಿನ ಮಳೆ ಅಡ್ಡಿಯಾಯಿತು. ಆದರೂ ಮಳೆ ಬಿಡುವಿನ ನಂತರ ಮತ್ತೆ ಶೋಧ ಕಾರ್ಯ ಸಿಬ್ಬಂದಿ ಮುಂದುವರೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin