ಶಾಂತಿ-ಸುವ್ಯವಸ್ಥೆಗೆ ಧಕ್ಕೆ :ರೌಡಿ ಭರತ್ ವಿರುದ್ಧ ಗೂಂಡಾ ಕಾಯ್ದೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

roudi-bharath-'
ಬೆಂಗಳೂರು, ಜ.24-ನಗರದಲ್ಲಿ ಶಾಂತಿ-ಸುವ್ಯವಸ್ಥೆಗೆ ಪದೇ ಪದೇ ಧಕ್ಕೆ ಉಂಟುಮಾಡುತ್ತಿದ್ದ ಸಾರ್ವಜನಿಕ ಆಸ್ತಿ ಹಾಗೂ ಜೀವಕ್ಕೆ ಹಾನಿಯುಂಟುಮಾಡುತ್ತ ರೌಡಿ ಚಟುವಟಿಕೆಯನ್ನು ನಿರಂತರವಾಗಿ ಮುಂದುವರಿಸಿದ್ದ ಆರೋಪಿ ರೌಡಿ ಶೀಟರ್ ಭರತ್ ವಿರುದ್ಧ ಗೂಂಡಾಕಾಯ್ದೆ ಜಾರಿಯಾಗಿದೆ.  ಚಾಮರಾಜ ಪೇಟೆ ನಿವಾಸಿಯಾದ ಈತ ಹನುಮಂತನಗರ, ಚಾಮರಾಜಪೇಟೆ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ದ್ದಾನೆ.  ಹನುಮಂತ ನಗರ, ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಒಂದು ರಾಬರಿ, ಎರಡು ದರೋಡೆ ಯತ್ನ ಪ್ರಕರಣ ಹಾಗೂ ಐದು ಹಲ್ಲೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.   ಆರೋಪಿ ಭರತ್ ಹಲವಾರು ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದನು. ಪದೇ ಪದೇ ನಗರದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದನಲ್ಲದೆ ಆಸ್ತಿ ಹಾನಿಯುಂಟುಮಾಡುತ್ತ ತನ್ನ ರೌಡಿ ಚಟುವಟಿಕೆಯನ್ನು ನಿರಂತರವಾಗಿ ಮುಂದುವರಿಸಿದ್ದನು.  ಅಪರಾಧ ಚಟುವಟಿಕೆಗಳನ್ನು ತಡೆಯಲು ಹಾಲಿ ಕೇಂದ್ರ ಕಾರಾಗೃಹದಲ್ಲಿರುವ ಈತನ ವಿರುದ್ಧ ನಗರ ಪೊಲೀಸ್ ಆಯುಕ್ತರು ಗೂಂಡಾಕಾಯ್ದೆ ಜಾರಿಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin