ಶಾಕಿಂಗ್ ನ್ಯೂಸ್ : ಆಧಾರ್ ಸಂಖ್ಯೆ ನೀಡದಿದ್ದರೆ ಎಲ್‍ಪಿಜಿ ಸಿಲಿಂಡರ್ ಬಂದ್..!

ಈ ಸುದ್ದಿಯನ್ನು ಶೇರ್ ಮಾಡಿ

Adhaar--02

ಬೆಂಗಳೂರು,ಜ.27-ಈ ತಿಂಗಳ ಅಂತ್ಯದೊಳಗೆ ಅಡುಗೆ ಅನಿಲ(ಸಿಲಿಂಡರ್ ಗ್ಯಾಸ್) ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡದಿದ್ದರೆ ಎಲ್‍ಪಿಜಿ ಪೂರೈಕೆ ಬಂದ್ ಆಗುವುದು ಖಚಿತ.   ಈಗಾಗಲೇ ಡಿ.31ರೊಳಗೆ ಗ್ರಾಹಕರು ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯಲ್ಲಿ ಆಧಾರ್ ಸಂಖ್ಯೆಯ ಮಾಹಿತಿ ನೀಡಬೇಕೆಂದು ಸೂಚಿಸಿತ್ತು. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದರೆ ಜ.31ರೊಳಗೆ ನೀಡಲೇಬೇಕು.  ಹಾಗೊಂದು ವೇಳೆ ಯಾವುದಾದರೂ ಗ್ರಾಹಕರು ತಿಂಗಳಂತ್ಯದೊಳಗೆ ಆಧಾರ್ ಸಂಖ್ಯೆಯ ಮಾಹಿತಿ ನೀಡದಿದ್ದರೆ ಗ್ಯಾಸ್ ಪೂರೈಕೆಯಾಗುವುದಿಲ್ಲ. ಸುಪ್ರೀಂಕೋರ್ಟ್ ಮಾ.31ರವರೆಗೆ ಡೆಡ್‍ಲೈನ್ ನೀಡಿದ್ದರೂ ನಾವು ಈ ತಿಂಗಳ ಅಂತ್ಯದೊಳಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳದಿದ್ದರೆ ಗ್ರಾಹಕರಿಗೆ ಫೆ.1ರಿಂದಲೇ ಸಿಲಿಂಡರ್‍ಗಳನ್ನು ಪೂರೈಸುವುದಿಲ್ಲ ಎಂದು ಭಾರತೀಯ ತೈಲ ನಿಗಮ (ಐಓಸಿ) ತಿಳಿಸಿದೆ.

ಕರ್ನಾಟಕ, ತಮಿಳುನಾಡು, ಗೋವಾ, ಪಾಂಡಿಚೇರಿ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ನಾವು ಆಧಾರ್ ಸಂಖ್ಯೆಯನ್ನು ನೀಡದ ಗ್ರಾಹಕರಿಗೆ ಗ್ಯಾಸ್ ನೀಡುವುದಿಲ್ಲ. ಈಗಾಗಲೇ ಇದರ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಗ್ರಾಹಕರಿಗೆ ಸಾಮಾಜಿಕ ಜಾಲತಾಣ, ಎಸ್‍ಎಂಎಸ್ ಹಾಗೂ ದೂರವಾಣಿ ಮೂಲಕವೂ ಮಾಹಿತಿ ನೀಡಿದ್ದೇವೆ. ಆಧಾರ್ ಸಂಖ್ಯೆ ನೀಡುವುದರಿಂದ ಕಾಳದಂಧೆಕೋರರಿಗೆ ಕಡಿವಾಣ ಹಾಕಬಹುದು. ಎಲ್ಲ ಗ್ರಾಹಕರು ಶೀಘ್ರದಲ್ಲಿ ಆಧಾರ್ ನೀಡಿದರೆ ಒಳಿತೆಂದು ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin