ಶಾಕಿಂಗ್.. : ಭಾರತದ ಮೇಲೆ ದಾಳಿಗೆ 200 ಮಂದಿ ಭಯೋತ್ಪಾದಕರು ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

Terrorist-Active-In-JK

ನವದೆಹಲಿ, ನ.24-ಜಮ್ಮು ಮತ್ತು ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಇವರಲ್ಲಿ ಪಾಕಿಸ್ತಾನದಿಂದ ಭಾರತದೊಳಗೆ ನುಸುಳಿದ 105 ಉಗ್ರರೂ ಸೇರಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.  ರಾಜ್ಯಸಭೆಯಲ್ಲಿ ಈ ಕುರಿತು ಚುಕ್ಕಿ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಹನ್ಸ್‍ರಾಜ್ ಗಂಗಾರಾಮ್ ಆಹೀರ್, ಈ ವರ್ಷ ಸೆಪ್ಟೆಂಬರ್‍ವರೆಗೆ ಪಾಕಿಸ್ತಾನದಿಂದ 105 ಉಗ್ರರು ಒಳ ನುಸುಳಿದ್ದಾರೆ. ಲಭ್ಯವಿರುವ ಮಾಹಿತಿ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ 200 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಗಡಿಯಾಚೆಯಿಂದ ದೇಶದೊಳಗೆ ಉಗ್ರರು ನುಸುಳುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ರಾಜ್ಯದ ಸಮನ್ವಯದೊಂದಿಗೆ ಬಹು ಆಯಾಮದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗಡಿ ನಿರ್ವಹಣೆಯನ್ನು ಬಲಗೊಳಿಸುವುದು, ಅಂತಾರಾಷ್ಟ್ರೀಯ ಗಡಿ, ಗಡಿ ನಿಯಂತ್ರಣ ರೇಖೆ ಮತ್ತು ಅತಿಕ್ರಮಣ ಮಾರ್ಗಗಳಲ್ಲಿ ಬಹು ಹಂತದ ಸೇನೆ ನಿಯೋಜನೆಯೂ ಇದರಲ್ಲಿ ಒಳಗೊಂಡಿದೆ ಎಂದು ಅವರು ವಿವರಿಸಿದ್ದಾರೆ. ಗಡಿ ಭಾಗದಲ್ಲಿ ಮುಳ್ಳು ತಂತಿ ಬೇಲಿಯನ್ನು ಇನ್ನಷ್ಟು ಎತ್ತರಗೊಳಿಸುವ ಮತ್ತು ಅತಿಕ್ರಮಣ-ಒಳನುಸುಳುವಿಕೆಯನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹನ್ಸ್‍ರಾಜ್ ಹೇಳಿದ್ದಾರೆ.

ಗಡಿ ಪ್ರದೇಶಗಳಲ್ಲಿ ಯೋಧರು ಮತ್ತು ಸ್ಥಳೀಯ ಗ್ರಾಮಸ್ಥರ ರಕ್ಷಣೆಗಾಗಿ ಬಂಕರ್‍ಗಳ ನಿರ್ಮಾಣ, ಸುಧಾರಿತ ತಂತ್ರಜ್ಞಾ ನ ಅಳವಡಿಕೆ, ಭದ್ರತಾಪಡೆಗಳಿಗೆ ಆತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ಪೂರೈಕೆ, ಗುಪ್ರಚರ ಮತ್ತು ಕಾರ್ಯಾಚರಣೆಗಳ ಸಮನ್ವಯತೆ ಸುಧಾರಣೆ, ಗಡಿಯಲ್ಲಿ ಹೊನಲು ಬೆಳಕಿನ ವ್ಯವಸ್ಥೆಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin