ಶಾಮನೂರು ಶಿವಶಂಕರಪ್ಪಗೆ ಎಂ.ಬಿ.ಪಾಟೀಲ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

MB-Patil

ಬೆಂಗಳೂರು, ಸೆ.9- ನಿನ್ನೆ ನಡೆದ ವೀರಶೈವ ಮಹಾಸಭಾ ಪದಾಧಿಕಾರಿಗಳ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಮ್ಮ ಮೇಲೆ ಲಘುವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರು, ನಮ್ಮ ಸಮಾಜದ ಹಿರಿಯರು. ವೈಯಕ್ತಿಕವಾಗಿ ನನಗೆ ತಂದೆ ಸಮಾನರು. ಏಕವಚನದಲ್ಲಿ ಪ್ರತಿಕ್ರಿಯೆ ನೀಡಿರುವುದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಹೇಳಿದರು.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಮನೂರು ಶಿವಶಂಕರಪ್ಪ ಅವರ ಮೇಲೆ ಪ್ರೀತಿ-ಅಭಿಮಾನ ಇಟ್ಟಿದ್ದೇನೆ. ಆದರೆ, ವಯೋ ಸಹಜ ಗುಣಗಳಿಂದ ಅವರು ಪದೇ ಪದೇ ಸಾರ್ವಜನಿಕ ಸಭೆಗಳಲ್ಲಿ ಲಘುವಾಗಿ ಏಕವಚನದಲ್ಲಿ ಪ್ರತಿಕ್ರಿಯೆ ನೀಡಬಾರದು ಎಂದು ತಿಳಿಸಿದರು.

ಈ ಹಿಂದೆ ನಮ್ಮನ್ನು ಬಚ್ಚ ಎಂದು ಹೇಳಿದ್ದ ಅವರು, ಇದೀಗ ಎಂ.ಬಿ.ಪಾಟೀಲ್‍ಗೆ ತಲೆ ತಿರುಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ನನಗೆ ಜೀವ ಬೆದರಿಕೆ ಇದ್ದರೆ ಕೇಸು ದಾಖಲಿಸಲಿ ಎಂದಿದ್ದಾರೆ. ಆದರೆ, ನನಗೆ ಜೀವ ಬೆದರಿಕೆ, ಸೆಕ್ಯೂರಿಟಿ ಬೇಕು ಎಂದು ನಾನು ಎಲ್ಲೂ ಹೇಳಿಲ್ಲ ಎಂದರು. ಲಿಂಗಾಯತ ವೀರಶೈವ ಬಸವಾದಿ ಶರಣರ ಕುರಿತು ಅಪಾರ ಜ್ಞಾನ ಹೊಂದಿರುವ ವಿದ್ವಾಂಸರಾದ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸರ್ಕಾರ ಘೋಷಣೆ ಮಾಡಲಿ ಬಿಡಲಿ. ಆದರೆ ಎಂದಿಗೂ ಲಿಂಗಾಯತ ಸ್ವತಂತ್ರ್ಯ ಧರ್ಮ ಎಂಬ ಪ್ರತಿಪಾದನೆಗೆ ಶಿವಶಂಕರಪ್ಪನವರು ಲಘುವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಲಿಂಗಾಯತ ವೀರಶೈವ ಭಿನ್ನತೆ ಬಗ್ಗೆ ಗೊತ್ತಿಲ್ಲದೆ ಏನೇನೋ ಮಾತನಾಡುತ್ತಿದ್ದಾರೆ. ಮಹಾಸಭೆ ಅಧ್ಯಕ್ಷರಾದ ನಂತರವಾದರೂ ಶಿವಶಂಕರಪ್ಪನವರು ಅದನ್ನು ತಿಳಿದುಕೊಳ್ಳಬೇಕಿತ್ತು. ಇಲ್ಲಿಯವರೆಗೂ ಅವರು ಏನೂ ತಿಳಿದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Facebook Comments

Sri Raghav

Admin