ಶಾರದಾ ಚಿಟ್ ಫಂಡ್ ಹಗರಣ : ಪಿ.ಚಿದಂಬರಂ ಪತ್ನಿಗೆ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

S-Chidambaram

ನವದೆಹಲಿ, ಆ.24- ಬಹುಕೋಟಿ ರೂಪಾಯಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇಂದ್ರ ಹಣಕಾಸು ಖಾತೆ ಮಾಜಿ ಸಚಿವ ಪಿ.ಚಿದಂಬರಂ ಅವರ ಪತ್ನಿ ನಳಿನಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಕೊಲ್ಕತ್ತಾದಲ್ಲಿ ಮುಂದಿನ ತಿಂಗಳ ಆರಂಭದಲ್ಲಿ ನಡೆಯುವ ಈ ಪ್ರಕರಣದ ವಿಚಾರಣೆಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕೆಂದು ನಳಿನಿ ಅವರಿಗೆ ಸೂಚಿಸಲಾಗಿದೆ.  ಹಣ ದುರ್ಬಳಕೆ ತಡೆ ಕಾಯ್ದೆ (ಪಿಎಂಎಲ್ಎ) ನಿಯಮಗಳ ಅಡಿ ನಳಿನಿ ಅವರ ಹೇಳಿಕೆಗಳನ್ನು ಕೇಂದ್ರ ನಿರ್ದೇಶನಾಲಯ ದಾಖಲಿಸಿಕೊಳ್ಳುವ ನಿರೀಕ್ಷೆ ಇದೆ.

ಸುಪ್ರೀಂಕೋರ್ಟ್ ವಕೀಲರಾಗಿರುವ ನಳಿನಿ ಅವರಿಗೆ ಈ ಪ್ರಕರಣದ ವಕಾಲತ್ತು 1.26 ಕೋಟಿ ರೂ.ಗಳ ನ್ಯಾಯಿಕ ಶುಲ್ಕ ನೀಡಲಾಗಿದೆ ಎಂಬ ಪ್ರಕರಣದಲ್ಲಿ ಅವರು ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಪಡಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin