ಶಾರುಕ್, ಹೃತಿಕ್‍’ರನ್ನು ಹಿಂದಿಕ್ಕಿದ ಸುದೀಪ್..!

ಈ ಸುದ್ದಿಯನ್ನು ಶೇರ್ ಮಾಡಿ

Sudeepa 11

ಬೆಂಗಳೂರು,ಡಿ.25- ಕಳೆದ ವರ್ಷ ಕೋಟಿಗೊಬ್ಬ 2 ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕಿಚ್ಚ ಸುದೀಪ್ ಅವರು ಈಗ ಬಾಲಿವುಡ್‍ನ ಮೇರು ನಟರುಗಳಾದ ಶಾರುಕ್‍ಖಾನ್ ಹಾಗೂ ಹೃತಿಕ್‍ರೋಷನ್‍ಗಿಂತ ಹೆಚ್ಚಿನ ಕ್ರೇಜ್ ಸೃಷ್ಟಿಸಿದ್ದಾರೆ. ತನ್ನ ಮುಂದಿನ ಚಿತ್ರ ಹೆಬ್ಬುಲಿಯ ಚಿತ್ರೀಕರಣದ ಆರಂಭದಿಂದಲೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಸೃಷ್ಟಿಸಿರುವ ಕಿಚ್ಚ ಸುದೀಪ್‍ರ ಈ ಸಿನಿಮಾ 2017ರಲ್ಲಿ ಬಹು ನಿರೀಕ್ಷೆಯ ಚಿತ್ರ ಎಂಬ ಖ್ಯಾತಿಯನ್ನು ಗಳಿಸಿದೆ ಎಂದು ಐಎಂಡಿಬಿ ನಡೆಸಿದ ವಿಶ್ಲೇಷಣೆ ತಿಳಿಸಿದೆ.

ಈ ಪಟ್ಟಿಯಲ್ಲಿ ಕಿಚ್ಚ ಸುದೀಪ್ ನಟಿಸಿರುವ ಹೆಬ್ಬುಲಿ (25.8%) ಟಾಪ್ ನಂ.1 ಸ್ಥಾನದಲ್ಲಿದ್ದರೆ, ಶಾರುಕ್‍ಖಾನ್ ಅಭಿನಯದ ರಹೀಸ್ (25%) ಹಾಗೂ ತಮಿಳಿನ ಖ್ಯಾತ ನಟ ಸೂರ್ಯ ನಟನೆ ಇರುವ ಸಿಂಗಂ 3 (21.1%) ನಂತರದ ಸ್ಥಾನವನ್ನು ಗಳಿಸಿದೆ. ಕ್ರಿಷ್ ಖ್ಯಾತಿಯ ಹೃತಿಕ್‍ರೋಷನ್ ನಟಿಸಿರುವ ಕಾಬೀಲ್, ಓಕೆ ಜಾನು, ಹರಾಮ್‍ಕೋರ್, ವಿರಾಮ್, ಎಜ್ರಾ, ಜಾಲಿ ಎಲ್‍ಎಲ್‍ಬಿ-2, ಭೈರವ ಬಲು ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳ ಸಾಲಿನಲ್ಲಿ ನಿಂತಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin