ಶಾರೂಖ್ ಗೆ ಜಿಂಕೆ ಚರ್ಮದ ಚಪ್ಪಲಿ ತಯಾರಿಸಿದ್ದ ಪಾಕ್ ನ ವ್ಯಕ್ತಿಗೆ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Sharukh-Khan

ಇಸ್ಲಾಮಾಬಾದ್, ಆ.27-ಬಾಲಿವುಡ್ ನಟ ಶಾರೂಖ್ ಖಾನ್ ಅವರಿಗಾಗಿ ಜಿಂಕೆ ಚರ್ಮದಿಂದ ಚಪ್ಪಲಿ ತಯಾರಿಸಿದ್ದ ಪಾಕಿಸ್ತಾನದ ವ್ಯಕ್ತಿಯೋರ್ವನನ್ನು ಇಲ್ಲಿನ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಪೇಶಾವರದ ಜಹಾಂಗೀರ್ ಖಾನ್ ಎಂಬಾತ ಬಂಧಿತ ವ್ಯಕ್ತಿ. ಅನುಭವಿ ಹಾಗೂ ಪ್ರಸಿದ್ಧ ಚಪ್ಪಲಿ ತಯಾರಕನಾದ ಜಹಾಂಗೀರ್ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ಎಚ್ಚೆತ್ತ ಇಲ್ಲಿನ ವನ್ಯಜೀವಿ ಇಲಾಖೆ ಜಹಾಂಗೀರ್ನನ್ನು ವಶಕ್ಕೆ ಪಡೆದಿದೆ. ಅಲ್ಲದೇ ಜಿಂಕೆ ಚರ್ಮ ಮತ್ತು ಚಪ್ಪಲಿಯನ್ನು ಅಧಿಕಾರಿಗಳು ಜಫ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಜಿಂಕೆ ಹತ್ಯೆಗೆ ಪಾಕಿಸ್ತಾನದಲ್ಲಿ ನಿಷೇಧವಿದ್ದು, ಆರೋಪಿ ಜಹಾಂಗೀರ್ಗೆ ಜಿಂಕೆ ಚರ್ಮ ಹೇಗೆ ಸಿಕ್ಕಿತು ಮತ್ತು ಈ ಅಕ್ರಮದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುವುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.   ಇನ್ನು, ಶಾರೂಖ್ರ ಸೋದರ ಸಂಬಂಧಿ ನೂರ್ ಜಹಾನ್ ಎಂಬುವವರು ಮುಂದಿನ ತಿಂಗಳು ಭಾರತಕ್ಕೆ ಬರಲಿದ್ದು, ಅವರು ಈ ಜಿಂಕೆ ಚರ್ಮದ ಚಪ್ಪಲಿಗಳನ್ನು ಶಾರೂಖ್ಗೆ ತಂದುಕೊಡಲಿದ್ದರು. ಅಷ್ಟರಲ್ಲಾಗಲೇ ಜಹಾಂಗೀರ್ ಖಾನ್ ಬಂಧನವಾಗಿದ್ದು, ಚಪ್ಪಲಿ ಈಗ ಪಾಕ್ ಅಧಿಕಾರಿಗಳ ವಶದಲ್ಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin