ಶಾರ್ಟ್ ಸಕ್ರ್ಯೂಟ್ : ಫೋಟೊ ಸ್ಟುಡಿಯೋಗೆ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

tumakuru

ತುಮಕೂರು,ಆ.31-ಶಾರ್ಟ್ ಸಕ್ರ್ಯೂಟ್‍ನಿಂದ ಫೋಟೊ  ಸ್ಟುಡಿಯೋಗೆ ಬೆಂಕಿ ತಗುಲಿಗೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಇಂದು ಮುಂಜಾನೆ 4.30ರಲ್ಲಿ ಸಂಭವಿಸಿದೆ. ಉಪ್ಪಾರಳ್ಳಿಯಲ್ಲಿರುವ ಚಿನ್ನು ಸ್ಟುಡಿಯೋಗೆ ಬೆಂಕಿ ತಗುಲಿದ್ದು, ಎರಡು ದೊಡ್ಡ ಕ್ಯಾಮೆರಾ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಎನ್‍ಇಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ್ತ ನಿರೀಕ್ಷಕ ರಾಘವೇಂದ್ರ, ಸಬ್‍ಇನ್‍ಸ್ಪೆಕ್ಟರ್ ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin