ಶಾರ್ಟ್ ಸರ್ಕ್ಯೂಟ್’ನಿಂದ ಬಜಾಜ್ ಷೋ ರೂಂಗೆ ಬೆಂಕಿ : 120ಕ್ಕೂ ಹೆಚ್ಚು ಬೈಕ್ ಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Bike-0002

ಬೀದರ್.ನ.04 : ಇಲ್ಲಿನ ಬಜಾಜ್ ಷೋ ರೂಂ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ 120ಕ್ಕೂ ಹೆಚ್ಚು ಬೈಕ್ ಬಕ್ ಸುಟ್ಟು ಕರಕಲಾಗಿವೆ. 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಭಸ್ಮವಾಗಿವೆ. ಜಿಲ್ಲೆಯ ಮನ್ನಳ್ಳಿ ಮುಖ್ಯರಸ್ತೆಯಲ್ಲಿರುವ ಜೈ ಭವಾನಿ ಬಜಾಜ್ ಷೋರೂಮ್ ನಲ್ಲಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಅಗ್ನಿ ಅನಾಹುತ ಸಂಭವಿಸಿದ್ದು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

ನರೇಂದ್ರ ಗೌಡಶೆಟ್ಟಿ ಎಂಬುವವರಿಗೆ ಸೇರಿದ ಈ ಷೋ ರೂಮ್ನಲ್ಲಿ ಪಲ್ಸರ್, ಅವೆಂಜರ್, ಪ್ಲಾಟಿನಾ ಸೇರಿದಂತೆ ದುಬಾರಿ ಬೆಲೆಯ ಬೈಕ್ ಗಳು ಸುಟ್ಟು ಹೋಗಿವೆ. ಈ ವಾಹನಗಳಿಗೆ ಜೀವವಿಮೆ ಕೂಡ ಇರಲಿಲ್ಲ ಎಂದು ಷೋ ರೂಮ್ ಮಾಲೀಕ ನರೇಂದ್ರ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin