ಶಾಲಾ ಆವರಣದಲ್ಲಿ ಅಪರಿಚಿತ ವ್ಯಕ್ತಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

murder-6ಕನಕಪುರ, ಅ.26-ತಾಲ್ಲೂಕಿನ ಚಿಕ್ಕಮುದವಾಡಿ ಗೇಟ್‍ನ ತಿಮ್ಮಸಂದ್ರ ಗ್ರಾಮದ ಸರ್ಕಾರಿ ಉರ್ದು ಪಾಠಶಾಲೆ ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಮಾಡಿರುವ ಘಟನೆ ನಡೆದಿದೆ.ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯನ್ನು ಶಾಲೆಯಲ್ಲಿ ಕೊಲೆ ಮಾಡಲಾಗಿದೆ. ಬೆಳಿಗ್ಗೆ ಇದನ್ನು ಕಂಡ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಡಿವೈಎಸ್‍ಪಿ ಲೋಕೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಸಿದ್ದೇಗೌಡ, ಎಸ್‍ಐ ಕುಮಾರಸ್ವಾಮಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವ್ಯಕ್ತಿಯ ಚಹರೆ :

5.5 ಅಡಿ ಉದ್ದ, ಕಪ್ಪುಬಣ್ಣ, ಕುರುಚಲು ಗಡ್ಡ, ಕರಿಮೀಸೆ, ತೆಳ್ಳನೆಯ ದೇಹ ಹೊಂದಿರುವ ಈ ಅಪರಿಚಿತ ವ್ಯಕ್ತಿಯು ನೀಲಿ ಬಣ್ಣದ ಚೌಕ್ಲಿ ಲುಂಗಿ, ಹಸಿರು ಬಣ್ಣದ ಅಂಗಿ, ನೀಲಿ ಬಣ್ಣದ ನಿಕ್ಕರ್ ತೊಟ್ಟಿದ್ದಾನೆ. ಈತನನ್ನು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಲಾಗಿದೆ, ಯಾರು ಕೊಲೆ ಮಾಡಿದ್ದಾರೆ ಎಂಬುದು ಪತ್ತೆಯಾಗಿಲ್ಲ. ವಿಚಾರಣೆಯ ನಂತರವೇ ಸತ್ಯ ಹೊರಬೀಳಬೇಕಾಗಿದೆ. ಶವವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ ಎಂದು ಗ್ರಾಮಾಂತರ ಠಾಣಾಧಿಕಾರಿ ಕುಮಾರಸ್ವಾಮಿ ತಿಳಿಸಿದ್ದಾರೆ.ಸಂಬಂಧಪಟ್ಟವರು ಅಥವಾ ಯಾರಾದರೂ ಮಾಹಿತಿಯುಳ್ಳವರಿದ್ದರೆ ರಾಮನಗರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಅಥವಾ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.080 27523616 ಅಥವಾ 9480802861 ಗೆ ಸಂಪರ್ಕಿಸಲು ಕೋರಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin