ಶಾಲಾ ಬಸ್‍ಗೆ ಬೆಂಕಿ ಹಚ್ಚಿದ ಚಾಲಕ, 11 ಮಕ್ಕಳ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Schoolm-B-us--01

ಬೀಜಿಂಗ್, ಜೂ.3-ತನಗೆ ಲಭಿಸಬೇಕಿದ ಹೆಚ್ಚುವರಿ ಕೆಲಸ ಮತ್ತು ರಾತ್ರಿ ಪಾಳಿ ವೇತನ ಕಡಿತಗೊಳಿಸಿದ ವಿಷಯದಲ್ಲಿ ಕುಪಿತಗೊಂಡ ಶಾಲಾ ಬಸ್ ಚಾಲಕನೊಬ್ಬ ತನ್ನ ವಾಹನಕ್ಕೇ ಬೆಂಕಿ ಹಚ್ಚಿದ ಪರಿಣಾಮವಾಗಿ 11 ಮಕ್ಕಳು ಸಜೀವದಹನಗೊಂಡ ಭೀಕರ ಘಟನೆ ಚೀನಾದ ಶಾಂಗ್‍ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಶಾಂಗ್‍ಡಾಂಗ್ ಪ್ರಾಂತ್ಯದ ಸುರಂಗ ಮಾರ್ಗದಲ್ಲಿ ತಡೆಗೋಡೆಗೆ ಬಸ್ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡು ಮೂರರಿಂದ ಆರು ವರ್ಷಗಳ 11 ಮಕ್ಕಳು ಮತ್ತು ಚಾಲಕ ಸುಟ್ಟು ಕರಕಲಾದರು ಎಂದು ವರದಿಯಾಗಿತ್ತು. ಆದರೆ ಬಸ್ಸಿಗೆ ಚಾಲಕನೇ ಬೆಂಕಿ ಹಚ್ಚಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.ಚಾಲಕನ ಸೀಟಿನ ಸ್ಥಳದಿಂದ ಬೆಂಕಿ ಹೊತ್ತಿಕೊಂಡಿದ್ದು, ಸಮೀಪದಲ್ಲೇ ಸಿಗರೇಟ್ ಲೈಟರ್ ಮುಚ್ಚಳ ಪತ್ತೆಯಾಗಿದೆ. ಅಲ್ಲದೇ ಬಸ್ಸಿನ ವಿವಿಧೆಡೆ ಡಿಸೇಲ್ ಸುರಿದಿರುವ ಕುರುಹುಗಳೂ ಕಂಡುಬಂದಿವೆ. ಚಾಲಕನ ಓವರ್‍ಟೈಮ್ ಮತ್ತು ನೈಟ್ ಶಿಫ್ಟ್ ವೇತನ ತಡೆಹಿಡಿಯಲಾಗಿತ್ತು. ಇದರಿಂದ ಕುಪಿತಗೊಂಡ ಈತ ಈ ಹೇಯ ಕೃತ್ಯ ಎಸಗಿ ತಾನೂ ಬೆಂಕಿಗಾಹುತಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin