ಶಾಲೆಗಳಲ್ಲಿ ಇನ್ನು ಬಿಸಿಯೂಟದ ಜೊತೆ ಚಕ್ಕುಲಿ ಮತ್ತು ನಿಪ್ಪಟ್ಟು ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

chakkali

ಬೆಂಗಳೂರು, ಆ.25-ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರ ಇನ್ನು ಮುಂದೆ ನಿಪ್ಪಟ್ಟು ಮತ್ತು ಚಕ್ಕುಲಿ ವಿತರಣೆ ಮಾಡಲು ಮುಂದಾಗಿದೆ. ಮಧ್ಯಾಹ್ನದ ಬಿಸಿಯೂಟ ಕೇವಲ ಮಕ್ಕಳ ಹಾಜರಾತಿಯನ್ನು ಆಕರ್ಷಿಸುವ ಯೋಜನೆಯಾಗಬಾರದು, ಇದರಿಂದ ಮಕ್ಕಳಿಗೆ ಪೌಷ್ಠಿಕಾಂಶ ದೊರೆಯಲು ಸರ್ಕಾರ ಆಲೋಚನೆ ಮಾಡುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರ ತಂಡವೊಂದು ವರದಿನೀಡಿತ್ತು.  ಈ ವರದಿಯಾನುಸಾರ ಇದೀಗ ರಾಜ್ಯಸರ್ಕಾರ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ (ರಜಾ ದಿನ ಹೊರತುಪಡಿಸಿ)ಎಲ್ಲಾ ದಿನ ನಿಪ್ಪಟ್ಟು , ಚಕ್ಕುಲಿ ನೀಡಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಬಿಸಿಯೂಟದಲ್ಲಿ ಸದ್ಯಕ್ಕೆ ಅನ್ನ, ಸಾಂಬಾರು ಮತ್ತು ವಾರದ ಮೂರು ದಿನದಲ್ಲಿ ಹಾಲು ವಿತರಣೆ ಮಾಡಲಾಗುತ್ತಿದೆ.  ಉತ್ತರ ಕರ್ನಾಟಕದ ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಭಾಗದ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯಿರುವುದು ಪತ್ತೆಯಾಗಿತ್ತು. ಇಲ್ಲಿ ಹುಟ್ಟುವ ಮಕ್ಕಳಿಗೆ ಹಾಗೂ ಒಂದರಿಂದ ಐದು ವರ್ಷದೊಳಗಿನ ಮಕ್ಕಳು ದೈಹಿಕ ಮತ್ತು ಭೌತಿಕವಾಗಿ ಬೆಳವಣಿಗೆ ಕುಂಠಿತವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಇನ್ನು ಮುಂದೆ ಪ್ರತಿದಿನ ಊಟದ ಜೊತೆಗೆ ಒಂದು ಚಕ್ಕುಲಿ, ಮತ್ತೊಂದು ದಿನ ನಿಪ್ಪಟ್ಟು, ವಾರದ ಆರು ದಿನಗಳಲ್ಲಿ ಕೆನೆಭರಿತ ಹಾಲು ಮಕ್ಕಳಿಗೆ ವಿತರಣೆಯಾಗಲಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ಇನ್ನು ಮುಂದೆ ರಾಜ್ಯಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕೆ ಕೇರಳ ಮತ್ತು ಆಂಧ್ರಪ್ರದೇಶದ ಮಾದರಿಯಲ್ಲಿ ಸಾಂಬಾರ್ ವಿತರಣೆ ಮಾಡಲಿದೆ. ಒಂದು ದಿನ ತರಕಾರಿ, ಮತ್ತೊಂದು ದಿನ ತಿಳಿ ಸಾರು, ಮಜ್ಜಿಗೆ ಹುಳಿ ಸಿಗಲಿದೆ.

ರಾಜ್ಯಾದ್ಯಂತ ಸದ್ಯಕ್ಕೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅಕ್ಷಯ ಪಾತ್ರೆ ಫೌಂಡೇಶನ್ (ಇಸ್ಕಾನ್) ವಹಿಸಿಕೊಂಡಿದೆ. ಇದೀಗ ಚಕ್ಕುಲಿ ಮತ್ತು ನಿಪ್ಪಟ್ಟು ಇವರಿಗೆ ವಿತರಣೆ ಮಾಡಲು ಸರ್ಕಾರ ನಿರ್ದೇಶನ ನೀಡಿದೆ.   ಪ್ರತಿದಿನ ಒಂದು ಮಗುವಿಗೆ 100 ಗ್ರಾಂ ಪ್ರಮಾಣದ ಅನ್ನ ನೀಡಬೇಕು. ಇದಕ್ಕೆ ಇಸ್ಕಾನ್ ಒಂದು ಊಟಕ್ಕೆ ಇಂತಿಷ್ಟು ಪ್ರಮಾಣದಲ್ಲಿ ದರ ನಿಗದಿ ಮಾಡುತ್ತದೆ. ಈಗ ಚಕ್ಕುಲಿ ಮತ್ತು ನಿಪ್ಪಟು ನೀಡಬೇಕಾಗಿರುವುದರಿಂದ ಊಟದ ದರ ಹೆಚ್ಚಾಗುವ ಸಾಧ್ಯತೆ ಇದೆ.   ಸರ್ಕಾರ ಹಾಗೂ ಇಸ್ಕಾನ್ ನಡುವೆ ಈಗಾಗಲೇ ಮಾತುಕತೆ ನಡೆದಿದ್ದು, ಪ್ರಾಯಶಃ ಅಕ್ಟೋಬರ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ

► Follow us on –  Facebook / Twitter  / Google+

 

Facebook Comments

Sri Raghav

Admin