ಶಾಲೆಯ ಗೋಡೆಮೇಲೆ ಅಶ್ಲೀಲ ಬರಹಗಳು, ಕಾರಣ ಕೇಳಿ ಬಿಇಒ ನೋಟಿಸ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Channarayapatna

ಚನ್ನರಾಯಪಟ್ಟಣ, ಜು.7-ನಗರದ ಶಾಲೆಯೊಂದರ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ಗೋಡೆ ಮೇಲೆ ಅಶ್ಲೀಲ ಬರಹಗಳು ಇರುವುದಕ್ಕೆ ಸ್ಪಷ್ಟ ಕಾರಣ ಕೇಳಿ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಪಟ್ಟಣದ ನವೋದಯ ಬಾಲಕಿಯರ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ಗೋಡೆಗಳ ಮೇಲೆ ಅಶ್ಲೀಲ ಬರಹಗಳು ಕಾಣಿಸಿಕೊಂಡಿದ್ದಕ್ಕೆ ಕೋಪಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂರು ದಿನದೊಳಗೆ ಸ್ಪಷ್ಟ ಕಾರಣ ನೀಡುವಂತೆ ನೋಟಿಸ್‍ನಲ್ಲಿ ತಿಳಿಸಿದ್ದಾರೆ.

ಇಲ್ಲದಿದ್ದರೆ ಶಿಕ್ಷಣ ಕಾಯ್ದೆ ಕಲಂ 39ರ ಅಡಿ ಸೂಕ್ತ ಕ್ರಮ ಜರುಗಿಸಲಾಗುವುದು, ಶಾಲಾ ಮಾನ್ಯತೆಯನ್ನು ರದ್ದುಮಾಡಲಾಗುವುದು ಹಾಗೂ ಅನುದಾನವನ್ನು ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Facebook Comments

Sri Raghav

Admin