ಶಾಸಕರ ಪುತ್ರಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್, ಮಾಸ್ತಿಗುಡಿ ನಿರ್ಮಾಪಕನ ಜೊತೆ ಮದುವೆ

ಈ ಸುದ್ದಿಯನ್ನು ಶೇರ್ ಮಾಡಿ

Mastigudi--01

ಮೈಸೂರು, ಮಾ.8- ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಶಾಸಕರ ಪುತ್ರಿ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್‍ಗೌಡ ಅವರೊಂದಿಗೆ ಚಾಮುಂಡಿಬೆಟ್ಟದಲ್ಲಿ ವಿವಾಹ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಂದರ್‍ಗೌಡ ಅವರ ಕುಟುಂಬದ ಹನ್ನೆರಡಕ್ಕೂ ಹೆಚ್ಚು ಮಂದಿ ನಗರದ ಹುಣಸೂರು ರಸ್ತೆಯಲ್ಲಿರುವ ದಿ ರೂಸ್ಟ್ ರೆಸಾರ್ಟ್‍ನಲ್ಲಿ ನಿನ್ನೆ ವಾಸ್ತವ್ಯ ಹೂಡಿದ್ದರು. ಇಂದೂ ಕೂಡ ಅಲ್ಲೇ ಅವರುಗಳೆಲ್ಲ ತಂಗಿದ್ದಾರೆ.

ಶಾಸಕ ಶಿವಮೂರ್ತಿ ನಾಯ್ಕ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಫ್ತಿಯಲ್ಲಿ ಮೈಸೂರಿಗೆ ಆಗಮಿಸಿ ಇಂದು ದಿ ರೂಸ್ಟ್ ರೆಸಾರ್ಟ್‍ನಲ್ಲಿ ತಪಾಸಣೆ ನಡೆಸಿದರು.ಶಾಸಕರ ಪುತ್ರಿ ಹಾಗೂ ಸುಂದರ್‍ಗೌಡ ರೆಸಾರ್ಟ್‍ನಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಅಲ್ಲಿದ್ದ ಸುಂದರ್‍ಗೌಡರ ಕುಟುಂಬ ಸದಸ್ಯರಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಸುರೇಶ್‍ಗೌಡ ಹಾಗೂ ಶಾಸಕರ ಪುತ್ರಿ ವಿವಾಹ ಮಾಡಿಕೊಂಡ ನಂತರ ಗೌಪ್ಯಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆಯೇ ಮನೆ ಬಿಟ್ಟು ಹೋಗಿರುವ ಲಕ್ಷ್ಮಿ ಅವರಿಗಾಗಿ ಶಾಸಕರ ಕುಟುಂಬಸ್ಥರು ಹಲವು ಕಡೆ ಹುಡುಕಾಟ ನಡೆಸಿದ್ದಾರೆ. ಮೈಸೂರಿನ ರೆಸಾರ್ಟ್ ಒಂದರಲ್ಲಿ ಮದುವೆ ನಡೆಯಲಿದೆ ಇರಬಹುದೆಂಬ ಎಂಬ ಸುದ್ದಿನಂಬಿ ಅಲ್ಲಿಗೂ ಶಾಸಕರ ಕುಟುಂಬಸ್ಥರು ಬಂದು ಹುಡುಕಾಟ ನಡೆಸಿದ್ದಾರೆ ಆದರೆ ಅಲ್ಲಿಯೂ ಅವರ ಸುಳಿವು ದೊರೆತಿಲ್ಲ. ಕೊನೆಗೆ ಇದೀಗ ನವ ಜೋಡಿ ತಮ್ಮ ಮದುವೆ ಬಗ್ಗೆ ಸೆಲ್ಪೀ ವಿಡಿಯೋವನ್ನು ಹಂಚಿಕೊಂಡಿದ್ದು ಎಲ್ಲ  ಪ್ರಶ್ನೆಗಳಿಗೆ ಉತ್ತರ ದೊರಕಿದಂತಾಗಿದೆ .

Facebook Comments

Sri Raghav

Admin