ಶಾಸಕರ ಭವನದಲ್ಲಿ ಶಾಸಕರಿಗೆ ಜಿಎಸ್‍ಟಿ ಪಾಠ..!

ಈ ಸುದ್ದಿಯನ್ನು ಶೇರ್ ಮಾಡಿ

Koliwad--01

ಬೆಂಗಳೂರು, ಜೂ.8- ಕೇಂದ್ರ ಸರ್ಕಾರ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ತರುತ್ತಿರುವ ಏಕರೂಪ ಕಾಯ್ದೆ ಜಿಎಸ್‍ಟಿ ಬಗ್ಗೆ ಶಾಸಕರಿಗೆ ಇಂದು ಮಾಹಿತಿ ನೀಡಲಾಯಿತು. ಶಾಸಕರ ಭವನದಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಿಗೆ ಜಿಎಸ್‍ಟಿ ಕುರಿತು ಕೃಷಿ ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದರು.  ಜಿಎಸ್‍ಟಿ ಕಾಯ್ದೆ ಅನುಷ್ಠಾನದಿಂದ ಸ್ಪರ್ಧೆ ಹೆಚ್ಚಾಗಲಿದೆ. ಜತೆಗೆ ಮಾರುಕಟ್ಟೆಯಲ್ಲಿ ಗುಣಮಟ್ಟದ ವಸ್ತುಗಳು ಗ್ರಾಹಕರಿಗೆ ಸಿಗುತ್ತವೆ ಎಂದು ಸಚಿವರು ಶಾಸಕರಿಗೆ ಮಾಹಿತಿ ನೀಡಿದರು.ಜಿಎಸ್‍ಟಿಯಿಂದ  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ವಸ್ತುಗಳು ಕೂಡ ಸ್ಪರ್ಧೆ ಮಾಡಲು ಅನುಕೂಲವಾಗುತ್ತದೆ. ಆದರೆ, ರಾಜ್ಯ ಸರ್ಕಾರಗಳಿಗೆ ಉಪಕರಗಳನ್ನು ವಿಧಿಸಲು ಅವಕಾಶ ಇರುವುದಿಲ್ಲ ಎಂದರು. ನಿನ್ನೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಎಸ್‍ಟಿ ಕುರಿತ ವಿಧೇಯಕ ಮಂಡಿಸಿದಾಗ ಹಲವು ಶಾಸಕರು ಜಿಎಸ್‍ಟಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ಆಗ ಮುಖ್ಯಮಂತ್ರಿ ಜಿಎಸ್‍ಟಿ ಕುರಿತ ಸಭೆ ನಡೆಸಿ ಕೃಷ್ಣಭೈರೇಗೌಡರಿಂದ ಮಾಹಿತಿ ಒದಗಿಸುವಂತೆ ಸಲಹೆ ಮಾಡಿದ್ದರು. ಆ ಸಲಹೆ ಮೇರೆಗೆ ಇಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಮಾಹಿತಿ ನೀಡುವ ಸಭೆ ನಡೆಸಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ, ಶಾಸಕರಾದ ಸುರೇಶ್‍ಕುಮಾರ್, ಎಚ್.ಸಿ.ಬಾಲಕೃಷ್ಣ, ಆನಂದ್ ಮಾಮನಿ, ಬಿ.ಆರ್.ಪಾಟೀಲ್, ಪಿ.ರಾಜೀವ್ ಸೇರಿದಂತೆ ಹಲವು ಶಾಸಕರು, ಅಧಿಕಾರಿಗಳು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin