ಶಾಸಕರ ಸಂಬಂಧಿಯ ಕಾರು ಕಳವು ವಿಫಲ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ತುಮಕೂರು, ಆ.18- ನಗರ ಶಾಸಕ ಡಾ.ರಫೀಕ್ ಅಹಮ್ಮದ್ ಅವರ ಭಾಮೈದ ಅಲ್ತಾಫ್ ಅವರಿಗೆ ಸೇರಿದ ಕಾರನ್ನು ಕಳವು ಮಾಡುವ ವಿಫಲ ಯತ್ನ ಇಂದು ಬೆಳಗಿನ ಜಾವ ನಡೆದಿದ್ದು, ಸ್ಥಳಕ್ಕೆ ನಗರ ಠಾಣೆ ಪೊ ಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬಾರ್‍ಲೈನ್ ರಸ್ತೆಯಲ್ಲಿರುವ ಪೊ ಲೀಸ್ ಕ್ವಾರ್ಟರ್ಸ್ ಎದುರು ಗಡೆ ಇರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮ್ಮದ್ ಮನೆ ಮುಂದೆ ಇವರ ಪುತ್ರ ಅಲ್ತಾಫ್ ನಿಲ್ಲಿಸಿದ್ದ ಐ-10 ಕಾರನ್ನು ಇಂದು ಮುಂಜಾನೆ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರ ತಂಡ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ.ಕಾರಿನ ಕಿಟಕಿಯ ಗಾಜುಗಳನ್ನು ಒಡೆದು ಹಾಕಿ ವೈಯರ್‍ಗಳನ್ನು ಕತ್ತರಿಸಿದ್ದು, ಅಷ್ಟರಲ್ಲಿ ಎದುರಿನ ಪೊ ಲೀಸ್ ವಸತಿ ಗೃಹದಲ್ಲಿದ್ದ ಮಹಿಳೆಯೊಬ್ಬರು ಮನೆಯಿಂದ ಹೊರಬಂದಾಗ ಇವರ ನಡವಳಿಕೆಯಿಂದ ಅನುಮಾನಗೊಂಡು ಕಿರುಚಿದ್ದಾರೆ.ಆಗ ಕಳ್ಳರ ಗುಂಪು ಪರಾರಿಯಾಗಿದೆ. ಸ್ಥಳಕ್ಕೆ ನಗರ ಪೊ ಲೀಸ್ ಠಾಣೆ ಸಿಪಿಐ ರಾಘವೇಂದ್ರ, ಪಿಎಸ್‍ಐ ಉಮಾಶಂಕರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin