ಶಾಸಕ ಎಂ.ಪಿ.ರವೀಂದ್ರ ಅವರಿಗೆ ಕನಸಾಗಿಯೇ ಉಳಿಯಲಿದೆಯೇ ಕೆಎಂಎಫ್ ಅಧ್ಯಕ್ಷ ಹುದ್ದೆ

ಈ ಸುದ್ದಿಯನ್ನು ಶೇರ್ ಮಾಡಿ

MP-Raveendra--01

ಬೆಂಗಳೂರು, ಫೆ.17- ಕೆಎಂಎಫ್ ಅಧ್ಯಕ್ಷ ಸ್ಥಾನ ಅಲಂಕರಿಸುವ ಮಹದಾಸೆ ಹೊತ್ತಿರುವ ಶಾಸಕ ಎಂ.ಪಿ.ರವೀಂದ್ರ ಕನಸು ನನಸಾಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಹಾಲಿ ಅಧ್ಯಕ್ಷ ನಾಗರಾಜ್ ಶತಾಯ-ಗತಾಯ ಸ್ಥಾನಕ್ಕೆ ಅಂಟಿಕೊಳ್ಳಲು ಯತ್ನಿಸುತ್ತಿದ್ದು, ಯಾರೇ ಹೇಳಿದರೂ ಸೊಪ್ಪು ಹಾಕುತ್ತಿಲ್ಲ. ಸದ್ಯ ಅವರಿಂದ ರಾಜೀನಾಮೆ ನಿರೀಕ್ಷಿಸುವಂತೆಯೂ ಇಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ಕೆಎಂಎಫ್ ಅಧ್ಯಕ್ಷ ಗಾದಿಗಾಗಿ ನಡೆಯುತ್ತಿರುವ ಗುದ್ದಾಟ ಇನ್ನಷ್ಟು ದಿನ ಗೊಂದಲಮಯವಾಗಿಯೇ ಮುಂದುವರಿಯುವ ಲಕ್ಷಣ ಕಾಣುತ್ತಿದೆ.   ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್‍ನ ಹಲವು ನಾಯಕರು ನಾಗರಾಜ್‍ಗೆ ಈಗಾಗಲೇ ಸೂಚಿಸಿದ್ದಾರೆ. ಆದರೆ, ಇವರ ಮಾತಿಗೂ ಅಧ್ಯಕ್ಷ ನಾಗರಾಜ್ ಈ ತನಕ ಬೆಲೆ ಕೊಟ್ಟಿಲ್ಲವೆಂದು ಹೇಳಲಾಗುತ್ತಿದೆ. ಕನಿಷ್ಠ ಯಾವುದಕ್ಕೂ ಪ್ರತ್ಯುತ್ತರ ಕೂಡ ನೀಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಮುಖರ ಕೈಗೂ ಸಿಗದೇ ಓಡಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕೆಎಂಎಫ್ ಸಭೆ ನಡೆಸಿದ್ದ ನಾಗರಾಜ್, ಇದಾದ ಬಳಿಕ ದುಬೈಗೆ ಕೆಲ ನಿರ್ದೇಶಕರ ಜತೆಯಲ್ಲಿ ತೆರಳಿದ್ದರು. ಇದೀಗ ಅಲ್ಲಿಂದ ವಾಪಸಾಗಿದ್ದಾರೆ. ಇದುವರೆಗೂ ಇವರು ದುಬೈನಿಂದ ಬಂದ ಬಳಿಕ ಸಿಎಂ ಅಥವಾ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅಂಥ ಯಾವುದೇ ಬೆಳವಣಿಗೆಗಳು ಕಾಣುತ್ತಿಲ್ಲ. ಸಿಎಂ ಅಥವಾ ಸಚಿವರನ್ನು ಭೇಟಿ ಮಾಡಿದರೆ ಕೂಡಲೇ ರಾಜೀನಾಮೆ ನೀಡಿ ಎಂದು ಹೇಳುತ್ತಾರೆಂಬ ಆತಂಕ ಕಾಡುತ್ತಿರುವ ಹಿನ್ನೆಲೆಯಲ್ಲಿ ನಾಗರಾಜ್ ಯಾರನ್ನೂ ಭೇಟಿ ಮಾಡಲು ಇಷ್ಟಪಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಮಾರ್ಚ್‍ನಲ್ಲಿ ರಾಜೀನಾಮೆ?:

ಮಾರ್ಚ್‍ನಲ್ಲಿ ರಾಜೀನಾಮೆ ನೀಡುವುದಾಗಿ ಕೆಲ ಆಪ್ತ ನಿರ್ದೇಶಕರ ಬಳಿ ಹೇಳಿಕೊಂಡಿರುವ ನಾಗರಾಜ್ , ಈ ವಿಷಯವನ್ನು ಪಕ್ಷದ ಮುಖಂಡರಿಗೆ ತಿಳಿಸುವಂತೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಒಟ್ಟಾರೆ ಎಂ.ಪಿ.ರವೀಂದ್ರ ಅಧ್ಯಕ್ಷರಾಗುವ ಕನಸು ವರ್ಷದಿಂದ ಮುಂದುವರಿಯುತ್ತಲೇ ಇದೆ. ಮೊದಲ ಎರಡು ವರ್ಷದ ಅವಧಿಗೆ ನಾಗರಾಜï, ನಂತರದ ಮೂರು ವರ್ಷ ಅವಧಿಗೆ ಎಂ.ಪಿ.ರವೀಂದ್ರ ಅಧ್ಯಕ್ಷರಾಗಬೇಕೆಂಬ ಒಪ್ಪಂದದ ಮೇಲೆ ಮೊದಲ ಅವಧಿಗೆ ನಾಗರಾಜ್ ಅಧ್ಯಕ್ಷರಾಗಿದ್ದರು. ಆದರೆ, ನಂತರ ಒಂದೊಂದೇ ತಕರಾರು ಮಾಡುತ್ತಾ ಬಂದಿದ್ದು, 2016ರ ಸೆಪ್ಟೆಂಬರ್‍ಗೆ ರಾಜೀನಾಮೆ ನೀಡಬೇಕಿದ್ದರೂ ಇಂದಿಗೂ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin