ಶಾಸಕ ಯೋಗೇಶ್ವರ್‍ರಿಂದ ಜನಸಂಪರ್ಕ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

yogeshwar

ಚನ್ನಪಟ್ಟಣ, ಆ.10-ತಾಲೂಕಿನ ವಿರುಪಾಕ್ಷಿಪುರ ಹೋಬಳಿ ವ್ಯಾಪ್ತಿಯ ಕೋಡಂಬಹಳ್ಳಿ ಗ್ರಾಮದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಜನಸಂಪರ್ಕ ಸಭೆ ನಡೆಸಿದರು.ಸಭೆಯಲ್ಲಿ ರೈತರಿಗೆ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕರು ಕರೆನೀಡಿದರು. ಹಾಗೆಯೇ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಯೋಜನೆಗಳ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಸಂದರ್ಭದಲ್ಲಿ ವಿವಿಧ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ವತಿಯಿಂದ ಚೆಕ್ ವಿತರಣೆ ಹಾಗೂ ಮಾಸಾಶನಗಳ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಹಾಗೆಯೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬಾಪೂಜಿ ಸೇವಾ ಕೇಂದ್ರಕ್ಕೂ ಚಾಲನೆ ನೀಡಲಾಯಿತು.ಜಿ.ಪಂ.ಅಧ್ಯಕ್ಷ ಸಿ.ಪಿ.ರಾಜೇಶ್, ಜಿ.ಪಂ.ಸದಸ್ಯ ಪ್ರಸನ್ನಕುಮಾರ್, ತಾ.ಪಂ. ಅಧ್ಯಕ್ಷ ಎಚ್.ರಾಜಣ್ಣ, ತಹಸೀಲ್ದಾರ್ ಕೆ.ರಮೇಶ್, ಇಓ ಲೋಕೇಶ್, ಗ್ರಾ.ಪಂ. ಅಧ್ಯಕ್ಷೆ ಶ್ವೇತ, ಉಪಾಧ್ಯಕ್ಷ ಶಿವಬೀರಯ್ಯ, ಕಾಂಗ್ರೆಸ್ ಮುಖಂಡರುಗಳಾದ ಸಿದ್ದರಾಮಣ್ಣ, ಕೊಂಡಾಪುರ ಪುಟ್ಟೇಗೌಡ, ಎಸ್.ಸಿ. ಶೇಖರ್ ಮುಂತಾದವರಿದ್ದರು.

Facebook Comments

Sri Raghav

Admin