ಶಾಸಕ ಸಿ.ಪಿ.ಯೋಗೇಶ್ವರ್ ನಡೆ ನಿಜಕ್ಕೂ ಖಂಡನೀಯ

ಈ ಸುದ್ದಿಯನ್ನು ಶೇರ್ ಮಾಡಿ

yogesh

ಚನ್ನಪಟ್ಟಣ, ಅ.7 – ತಾಲ್ಲೂಕಿನಲ್ಲಿ ಮೂಲಭೂತ ಸಮಸ್ಯೆಗಳಾದ ಶುದ್ಧನೀರು, ಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಜ್ವಲಂತ ಸಂಸ್ಯೆಗಳಿದ್ದರೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 2015-16ರಲ್ಲಿ ಬಂದ 2 ಕೋಟಿ ರೂ.ವನ್ನು ತಾಲ್ಲೂಕಿನ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳದಿರುವ ಶಾಸಕ ಸಿ.ಪಿ.ಯೋಗೇಶ್ವರ್ ನಡೆ ನಿಜಕ್ಕೂ ಖಂಡನೀಯ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತಯ್ಯ ತಿಳಿಸಿದ್ದಾರೆ.ದಲಿತ ಪರ ಸಂಘಟನೆಗಳು ಮತ್ತು ದಲಿತ ಪರ ಮುಖಂಡರ ಸಭೆ ಕರೆದು ಮಾತನಾಡಿದ ಅವರು, ಈ ಹಿಂದೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಸುಮಾರು 2ಕೋಟಿ ರೂ.ಗಳನ್ನು ತಾಲ್ಲೂಕಿನ ಅಭಿವೃದ್ಧಿಗಾಗಿ ಬಳಸಿಕೊಳ್ಳದಿರುವ ಬಗ್ಗೆ ಮಾಧ್ಯಮದ ಮುಖೇನ ಜಿಲ್ಲಾಧಿಕಾರಿಗಳ ಕಛೇರಿಗೆ ದಾಖಲೆ ನೀಡಿದ್ದರೀಂದ ಸ್ವಲ್ಪ ಎಚ್ಚೆತ್ತುಕೊಂಡ ಶಾಸಕರು ಸೆಪ್ಟೆಂಬರ್ ಅಂತ್ಯವರೆಗೆ ಕೇವಲ 77.99 ಲಕ್ಷ ರೂ.ಗಳ ಕಾಮಗಾರಿಗೆ ಪತ್ರ ನೀಡಿದ್ದಾರೆ.
ಆದರೆ ಕಳೆದ ವರ್ಷ 2ಕೋಟಿ ಪ್ರಸಕ್ತ ವರ್ಷದ (2016-17 ಸಾಲಿನ) ಕ್ಷೇತ್ರದ ಪ್ರದೇಶಾಭಿವೃದ್ಧಿಗಾಗಿ 50 ಲಕ್ಷಗಳು ಬಿಡುಗಡೆಯಾದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಇಂದಿಗೂ ನೀಡದಿರುವುದರ ಶಾಸಕರ ಉದ್ದೇಶವೇನು ಎಂಬುದನ್ನು ತಾಲ್ಲೂಕಿನ ಜನತೆಗೆ ತಿಳಿಸಬೇಕಾಗಿದೆ? ಚನ್ನಪಟ್ಟಣ ತಾಲ್ಲೂಕು  ನ್ಯೂಯಾರ್ಕ್ ಹಾಗೂ ಸಿಂಗಪೂರ್‍ನಂತೆ ಆಗಿಬಿಟ್ಟಿದೆ ಎಂಬ ಭ್ರಮೆಯಲ್ಲಿದ್ದಾರೋ ತಿಳಿಯದಾಗಿದೆ ಎಂದು ಕಿಡಿಕಾರಿದರು. ನಿಮ್ಮ ಕಾರ್ಯಾಲಯದ ಕೂದಲೆಳೆಯ ಹತ್ತಿರವಿರುವ ತಾಲ್ಲೂಕಿನ ಹೆಮ್ಮೆಯ ಶಿಕ್ಷಣ ಕೇಂದ್ರ ಸರ್ಕಾರ ಪಾಲಿಟಿಕ್ನಿಕ್, ಸುಮಾರು 900 ಮಕ್ಕಳು ತಾಂತ್ರಿಕ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

 

ಅಲ್ಲಿನ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಚರಂಡಿ ವ್ಯವಸ್ಥೆ ಇದೆಯೇ ಎಂದು ತಿಳಿದುಕೊಂಡಿದ್ದೀರಾ? ಹೆಣ್ಣು ಮಕ್ಕಳ ಹಾಸ್ಟೆಲ್ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದೆ. ಜೊತೆಗೆ ಸರ್ಕಾರದಿಂದ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ನೀಡುವ ಗಂಗಾಕಲ್ಯಾಣ ಯೋಜನೆಯಲ್ಲಿ ಚನ್ನಪಟ್ಟಣ ಅಧಿಕಾರಿಗಳ ಲೋಪ ತಮ್ಮ ಗಮನಕ್ಕೆ ಬಂದಿಲ್ಲವೆ? ಮದು ಪ್ರಶ್ನಿಸಿದರು.
ದಲಿತ ಮುಖಂಡರಾದ ಶ್ರೀನಿವಾಸ್ ಕೋಟೆ , ಅಪ್ಪಗೆರೆ ಶ್ರೀನಿವಾಸ್ ಶಿವರಾಮು ತಾಲ್ಲೂಕು ಕಾರ್ಯದರ್ಶಿ ಬಿ.ಎಸ್.ಪಿ. ರಾಜೇಂದ್ರ, ಅಧ್ಯಕ್ಷರು ಆದಿಜಾಂಬವ ಸಂಘ ಚನ್ನಪಟ್ಟಣ. ಎಮ್.ಸಿ.ರವಿ ಮಂಗಳವಾರಪೇಟೆ. ಹರಿಸಂದ್ರ ಸತೀಶ್, ಹಾಗೂ ಮಳೂರುಪಟ್ಟಣ ರವೀಶ್ ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin