ಪಶ್ವಿಮ ಬಂಗಾಳ ರಾಜ್ಯದ ಹೆಸರು ಬದಲಾವಣೆ ಮಸೂದೆ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

mamata
ಕಲ್ಕತ್ತಾ:ಆ ,29- ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸಕಾರವು ಪಶ್ವಿಮ ಬಂಗಾಳ ರಾಜ್ಯದ ಹೆಸರನ್ನು ಬದಲಾವಣೆ ಮಾಡುವ ಮಸೂದೆಯನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಇಂಗ್ಲಿಷ್‌ನಲ್ಲಿ ಬೆಂಗಾಲ್ ಮತ್ತು ಬೆಂಗಾಲಿಯಲ್ಲಿ ಬಾಂಗ್ಲಾ ಹೆಸರು ಇರುವ ಮಸೂದೆಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಸಿದ್ದು. ಇದಕ್ಕೆ ಒಪ್ಪಿಗೆ ಸೂಚಿಸಿದರೆ ಇನ್ನು ಮುಂದೆ ಬಾಂಗ್ಲಾ ಅಥವಾ ಬೆಂಗಾಲ್ ಎಂದು ಮರು ನಾಮಕಾರಣವಾಗಲಿದೆ. ಕಳೆದ ತಿಂಗಳಲ್ಲಿ ಮಮತಾ ಬ್ಯಾನರ್ಜಿ ರಾಜ್ಯ ಸರ್ಕಾರವು ಹೆಸರು ಬದಲಾವಣೆ ತರಲು ಚಿಂತನೆ ನಡೆಸಿತ್ತು. ಈಗಿನ ಹೆಸರು ವೆಸ್ಟ್ ಬಂಗಾಲ್ ಬಗ್ಗೆ ಅನೇಕ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ರಾಷ್ಟ್ರೀಯ ಸಭೆಯಲ್ಲಿ ಮಾತುನಾಡುವಾಗ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಡಬ್ಲ್ಯೂ ಫಾರ್ ವೆಸ್ಟ್ ಬೆಂಗಾಲ್ ವರ್ಣಮಾಲೆಯಲ್ಲಿ ಕೊನೆಯಲ್ಲಿದ್ದು, ಈಸ್ಟ್ ಬೆಂಗಾಲ್ ನಿಂದಲೂ ಈ ಹೆಸರು ಇರುವುದರಿಂದ ಹಳೆಯ ಹೆಸರುನ್ನು ಬದಲಾವಣೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin