ಶಿಕ್ಷಕರು ಭವ್ಯಭಾರತ ಕಟ್ಟುವ ಆಧುನಿಕ ನಿರ್ಮಾತೃಗಳು

ಈ ಸುದ್ದಿಯನ್ನು ಶೇರ್ ಮಾಡಿ

belagam-3

ಬಾದಾಮಿ,ಸೆ.16- ಶಿಕ್ಷಕರು ಭವ್ಯ ಭಾರತವನ್ನು ಕಟ್ಟುವ ಆಧುನಿಕ ನಿರ್ಮಾತೃ ಗಳಾಗಿದ್ದು, ಅವರು ದೇವರ ಸಮಾನರಾಗಿದ್ದು, ದೇಶದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳೆ ಶಿಕ್ಷಕರು, ಹಗಳಿರುಳು ಅಧ್ಯಯನ ಮಾಡಿ ಮಕ್ಕಳಿಗೆ ಜ್ಞಾನವನ್ನು  ನೀಡಿ ಉತ್ತಮ ನಾಗರಿಕರನ್ನಾಗಿ ಮತ್ತು ಬುದ್ದಿಜೀವಿಗಳನ್ನಾಗಿ ರೂಪಿಸುವವರೆ ಶಿಕ್ಷಕರು ಅಂತ ಶಿಕ್ಷಕರ ಅರ್ಥಪೂರ್ಣವಾಗಿದೆ ಎಂದು ವಿದಾನ ಪರಿಷತ್ ಶಾಸಕ ಎಚ್.ಆರ್. ನಿರಾಣಿ ಹೇಳಿದರು.ಅವರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನೋತ್ಸವ ಸಮಾರಂಭ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ನಮಗೆಲ್ಲರಿಗೂ ಬೇಕು. ಆಜ್ಞಾನದ ಕೇಂದ್ರವೇ ಶಿಕ್ಷಕ, ಶಿಕ್ಷಕನ ಸೇವೆ ಅಪಾರ ಮತ್ತು ಅಮೂಲ್ಯ. ಅದಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ. ಅದುನಿಕ ಸಮಾಜದಲ್ಲಿ ಜ್ಞಾನದ ಅತ್ಯವಶ್ಯಕವಿದೆ ಜ್ಞಾನನವಿಲ್ಲದ ವ್ಯಕ್ತಿ ಬದುಕಿ ಬಾಳಲಾರ ಅದ್ದರಿಂದ ಈ ಕಾರ್ಯಕ್ರಮವನ್ನು ಪರಿಪೂರ್ಣವಾಗಿ ನಿರ್ವಹಿಸುವವನೇ ಶಿಕ್ಷಕ ಸಮಾಜ ಪವಿತ್ರ ಗೊಳಿಸುವಲ್ಲಿ ಶಿಕ್ಷಕನ ಶ್ರಮ ಶ್ಲಾಘನೀಯವಾಗಿದೆ ಎಂದರು. ವಿದಾನ ಪರಿಷತ್ ಶಾಸಕ ಅರುಣ ಶಹಾಪೂರ ಮಾತನಾಡಿ, ಶಿಕ್ಷಣ ನೀತಿ ಬದಲಾಗುವ ಅವಶ್ಯ ಕತೆ ಇದ್ದು ಕೇಂದ್ರ ಸರಕಾರ ಹೂಸ ನೀತಿ ಜಾರಿಗೆ  ತರುವ ನಿಟ್ಟಿನಲ್ಲಿ ಶಿಕ್ಷಕರಿಂದ ಅಬಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ ಶಿಕ್ಷಣದ ಜವಾಬ್ದಾರಿ ಹೊಂದಿದವರು ಅನುಭವವುಳ್ಳವರಾಗಿರಬೇಕು, ಶಿಕ್ಷಕರನ್ನು ಕೇವಲ ಬೋಧನೆಗೆ ಬಳಸಿಕೊಳ್ಳಬೇಕು. ಶಿಕ್ಷಕರ ಸಮಸ್ಯೆಗಳನ್ನು ಪ್ರಾಮಾಣಿಕ ವಾಗಿ ಬಗೆಹರಿಸಲು ಬದ್ಧತೆಯಿರಬೇಕೆಂದರು.
ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಆಡಳತಾಧಿಕಾರಿ, ಅತಿಥಿ ಉಪನ್ಯಾಸಕ ಕೆ.ಬಿ. ತಳಗೇರಿ ಮಾತನಾಡಿ, ಶಿಕ್ಷಕರ ಮೇಲೆ ಸಮಾಜದ ಪರಿವರ್ತನೆ ಜವಾಬ್ಹಾರಿಯಿದ್ದು ಅದನ್ನು ಸಮರ್ಥವಾಗಿ ನಿರ್ವಹಿಸುವ ಜೊತೆಗೆ ಸರ್ವಾಂಗೀಣ ಪ್ರಗತಿಗಾಗಿ ಚಿಂತಿಸುವ ಶಿಕ್ಷಕ ವೃತಿ ಪವಿತ್ರವಾಗಿದೆ ಮಕ್ಕಳ ವಿಕಾಸಕ್ಕೆ ಸೂಕ್ತ ವೇದಿಕೆ ಕಲ್ಪಿಸುತ್ತಾ ಸಮಾಜದಲ್ಲಿ ಬದಲಾವಣೆಯ ರೂವಾರಿಗಳಾಗಿದ್ದು ಡಾ.ಎಸ್ ರಾಧಾಕೃಷ್ಣ ಅವರ ವಿಚಾರಧಾರೆಗಳನ್ನು ಅರ್ಥೈಸಿ ಕೊಂಡು ಯುವ ಸಮೂಹಕ್ಕೆ ತಲುಪಿಸಿ ನಿಮ್ಮ ಮನೆ ಮಕ್ಕಳಂತೆ ವಿದ್ಯಾರ್ಥಿಗಳನ್ನು ಕಾಣಬೇಕು ಎಂದರು.
ನವಗ್ರಹ ಹಿರೇಮಠದ ಶಿವಪೂಜ  ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವಸಿದ್ದರು.

 

 

ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸುವರು. ತಾ.ಪಂ. ಅಧ್ಯಕ್ಷ ವಿಜಯಕುಮಾರ ಬೇಟಿಗಾರ, ಉಪಾಧ್ಯಕ್ಷೆ ಅಕ್ಕಮಹಾದೇವಿ ಜನಾಲಿ, ಪುರಸಭೆ ಅಧ್ಯಕ್ಷ ಫಾರೂಖ ದೊಡಮನಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಜಿ.ಪಂ.ಸದಸ್ಯರಾದ ಆಸಂಗೆಪ್ಪ ನಕ್ಕರಗುಂದಿ, ಬಸವರಾಜ ಹೊಸಮನಿ, ಶಶಿಕಲಾ ಯಡಹಳ್ಳಿ, ಇಂದ್ರವ್ವ ನಾಯ್ಕರ, ಸರಸ್ವತಿ ಮೇಟಿ, ಶಿಕ್ಷಣ ಸಂಯೋಜಕಿ ಸುನೀತಾ ಕೆಂದೋಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಜಿಲ್ಲಾ ಪ್ರಶಸ್ತಿ ಪಡೆದ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.ವಿವಿಧ ಶಿಕ್ಷಕ ಸಂಘದ ಪ್ರತಿನಿಧಿಗಳಿದ್ದರು. ಪ್ರಾಸ್ತಾವಿಕವಾಗಿ ಬಿಇಒ ಅಂದಾನಪ್ಪ ವಡಗೇರಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಶಿಕ್ಷಣ ದೈಹಿಕ ಪರಿವೀಕ್ಷಕ ವಿವೇಕಾನಂದ ಮೇಟಿ ಸ್ವಾಗತಿಸಿದರು. ಶಿಕ್ಷಕ ಹೊಸಮನಿ ನಿರೂಪಿಸಿ ವಂದಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin