ಶಿಕ್ಷಕರೆಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

huliyuru
ಹುಳಿಯಾರು, ಆ.24- ಶಿಕ್ಷಕರೆಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ಚಿಕ್ಕನಾಯ್ಕನಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕನ್ನಡ ಭಾಷಾ ಬೋಧಕರ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರ ಅಧ್ಯಯನ, ಪ್ರತಿನಿತ್ಯ ಪಠ್ಯ ಬೋಧನೆ ಹಾಗೂ ಅನುಭವದ ಒಟ್ಟಾರೆ ಫಲಿತಾಂಶವೇ ಪಾಂಡಿತ್ಯ. ಇದನ್ನು ಸಾಧಿಸುವ ಗುರಿ ಶಿಕ್ಷಕರಲ್ಲಿರಬೇಕು ಎಂದು ತಿಳಿಸಿದರು. ಕನ್ನಡ ಭಾಷಾ ಪರಿವೀಕ್ಷಕ ರಾಜು ಮಾತನಾಡಿ, ಅನುಭವದ ಆಧಾರದ ಮೇಲೆ ಸಿಸಿಇಗೆ ಸರಿಸಮನಾದ ರೀತಿ ಬೋಧಿಸಿ ಮಕ್ಕಳಿಗೆ ಮನನಮಾಡಿಸಿ ಉತ್ತಮ ಫಲಿತಾಂಶ ಹೊರತರಬೇಕು. ಹೊಸ ಆದೇಶದ ಪ್ರಕಾರ ನವೆಂಬರ್ ಮಾಹೆಗೆ ಪ್ರತಿಯೊಬ್ಬ ಶಿಕ್ಷಕರೂ 10 ಚಟುವಟಿಕೆಗಳ ಚಿತ್ರ ಸಹಿತ ದಾಖಲೆಗಳನ್ನು ನೀಡಬೇಕಿದೆ ಎಂದರು.

ಉಪಪ್ರಾಂಶುಪಾಲೆ ಡಿ.ಇಂದಿರಾ ಮಾತನಾಡಿ, ಕನ್ನಡ ಮಾತೃಬಾಷೆಯಾಗಿದ್ದರೂ ಮಕ್ಕಳಿಗೆ ಭಾಷೆಯ ಮೇಲೆ ಪಾಂಡಿತ್ಯ ಹಾಗೂ ಹಿಡಿತ ಸಾಧಿಸುವಂತೆ ಮಾಡುವುದು ಶಿಕ್ಷಕರ ಹೊಣೆಯಾಗಿದೆ. ಹಾಗಾಗಿ ಶಿಕ್ಷಕರು ಬೋಧನೆಯಲ್ಲಿ ಮಕ್ಕಳಿಗೆ ನ್ಯಾಯ ಒದಗಿಸಿದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.  ಸಂಪನ್ಮೂಲ ವ್ಯಕ್ತಿಗಳಾಗಿ ಸಾಸಲು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಸಂತೋಷ್, ಬರಕನಾಲ್ ವಿಶ್ವಭಾರತಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಕೆ.ವೀರಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಂಗನಕೆರೆ ಮಹೇಶ್, ವೆಂಕಟೇಶ್, ಯೋಗಮೂರ್ತಿ, ಶಿವರುದ್ರಯ್ಯ, ಪದ್ಮರಾಜು, ಮನ್ಸೂರ್ ಅಹಮದ್, ಸಿ.ಟಿ.ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin