ಶಿಕ್ಷಕರ ಬೆಂಬಲ ಮರೆಯಲಾರೆ

ಈ ಸುದ್ದಿಯನ್ನು ಶೇರ್ ಮಾಡಿ

mandya

ಮಂಡ್ಯ,ಆ.8- ನನ್ನ ಗೆಲುವಿಗೆ ನಾಲ್ಕೂ ಜಿಲ್ಲೆಗಳಲ್ಲಿ ಶಿಕ್ಷಕ ಸಮುದಾಯ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಅವರನ್ನು ನಾನೆಂದೂ ಮರೆಯುವ ಪ್ರಶ್ನೆಯೇ ಇಲ್ಲ ಎಂದು ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು. ಮಂಡ್ಯ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ನಡೆದ ವಿಧಾನ ಪರಿಷತ್‍ಗೆ ನೂತನವಾಗಿ ಆಯ್ಕೆಯಾದ ತಮಗೆ ನೀಡಿದ ಅಭಿನಂದನೆ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧನಿಯಾಗಿ ನಿಲ್ಲುತ್ತೇನೆ. ಈ ನನ್ನ ಗೆಲುವು ಸಂಘಟನೆ ಮತ್ತು ಹೋರಾಟಕ್ಕೆ ಸಿಕ್ಕ ಗೆಲುವು. ಈಗಾಗಲೇ 28 ದಿನಗಳ ಕಾಲ ಹೋರಾಟ ಕುಮಾರ ನಾಯಕ್ ವರದಿ ಜಾರಿಗಾಗಿ ಹೋರಾಟ ಮಾಡಿದ್ದೇವೆ. ಶೇ. 30ರಷ್ಟು ಯಶಸ್ಸು ಕಂಡಿದ್ದೇವೆ. ಇನ್ನು ನಮಗೆ ದೂರದ ಸವಾಲುಗಳಿವೆ. ವೇತನ ತಾರತಮ್ಯ, 7ನೇ ವೇತನ ಆಯೋಗ ಈ ರೀತಿಯ ಹೋರಾಟಗಳಿಗೆ ಜವಾಬ್ದಾರಿಯುತವಾಗಿ ಶಿಕ್ಷಕರ ಪರವಾಗಿ ಮುಂದೆ ನಿಲ್ಲುತ್ತೇನೆ ಎಂದರು.
ಇದೇ ವಳೆ ನಿವೃತ್ತಿಯಾದ ಜಿಲ್ಲಾ ಸಂಘದ ಸಹಕಾರ್ಯದರ್ಶಿ ಶೇರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್, ಕಾರ್ಯದರ್ಶಿ ಅಶೋಕ್‍ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ, ಉಪಾಧ್ಯಕ್ಷ ರಮೇಶ್, ಮುಖ್ಯ ಶಿಕ್ಷಕರ ಸಂಘದ ಶಿವರಾಮು, ದೇವರಾಜು, ರಾಜಣ್ಣ, ಹುಸ್ಕೂರು ಕೃಷ್ಣೇಗೌಡ ಇತರರಿದ್ದರು.

Facebook Comments

Sri Raghav

Admin

Leave a Comments