ಶಿಕ್ಷಣದಲ್ಲಿ ಕೌಶಲ್ಯಾಧಾರಿತ ಕೋರ್ಸ್ ಅವಶ್ಯಕತೆಯಿದೆ : ಜಯಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

belagam-9

ಗುರುವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಶಿಕ್ಷಕ ಎನ್.ಡಿ. ಗೊರವರ, ರಾಜ್ಯ ಪ್ರಶಸ್ತಿ ಶಿಕ್ಷಕ ಎಮ್.ಎ. ಘಂಟಿ, ಬಿ.ಆರ್.ಪೋಲಿಸಪಾಟೀಲ, ಹಾಗೂ ನಿವೃತ್ ಶಿಕ್ಷಕ, ಉಪನ್ಯಾಸಕರಾದ ಸಿ.ಎಮ್.ಕುರುಬರ, ಜಿ.ಬಿ.ಶೀಲವಂತ, ಎಮ್.ಎಫ್.ಕುರಿ, ಎಸ್.ಪಿ .ರಾಜನಾಳ, ಆರ್.ಜಿ.ಕೊಣ್ಣೂರ, ಎಸ್.ಎಮ್.ರಾಯನಗೌಡ್ರ, ಎಸ್,ಎಚ್,ವಾಸನ , ಎಚ್.ಎಮ್.ಖ್ಯಾಡದ, ಎಸ್.ಐ.ಕಟ್ಟಿಮನಿ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬಾದಾಮಿ,ಸೆ.27- ಆಡಿದ ಮಾತುಗಳು ಒಂದೆಯಾದರೂ ಕೇಳುವವರ ದೃಷ್ಠಿ ಕೋನದ ಮೇಲೆ ಅವಲಂಬಿತವಾಗಿರುತ್ತದೆ. ಆ ಮಾತುಗಳಗೆ ಬೇರೆ ಬೇರೆ ಅರ್ಥ ಬರುತ್ತದೆ. ಶಿಕ್ಷಕರು ಬೋಧಿಸಿದ ಪಾಠವು ವಿದ್ಯಾಥಿಗಳಿಗೆ ಅವರವರ ಅಭಿಪ್ರಾಯದಂತೆ ತೆಗೆದುಕೊಳ್ಳುತ್ತಾರೆ, ಶಿಕ್ಷಕರರು ಉತ್ತಮ ಬೋಧನೆ ಮಾಡುತ್ತ ಸುವಿಚಾರಗಳನ್ನು ತಿಳಿಸುತ್ತಾ ಜಗತ್ತಗೆ ಒಳ್ಳೆಯ ನಾಗರಿಕರನ್ನು ಕೊಡುಗೆ ಕೊಡುವ ನಿರ್ಮಾತೃರು ಎಂದು ವೀರಪುಲಿಕೇಶಿ ಸಂಸ್ಥೆಯ ಗೌರವ ಕಾರ್ಯದರ್ಶಿ ಜಯಣ್ಣ ಮಮದಾಪೂರ ಹೇಳಿದರುಅವರು ನಗರದ ವೀರಪುಲಿಕೇಶಿ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಂಡ ಗುರುವಂದನಾ, ರಾಜ್ಯ-ರಾಷ್ಟ್ರ ಪ್ರಶಸ್ತಿ ಹಾಗೂ ನಿವೃತ್ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅನುಕೂಲ ಮಾಡಬೇಕು, ಇಂದು ಸರಕಾರ ಎಲ್ಲರಿಗೂ ನೌಕರಿಯನ್ನು ಕೊಡಲು ಸಾಧ್ಯವಿಲ್ಲ ಕೇವಲ ಶೇ. 18ರಿಂದ 20ರಷ್ಟು ಕಲಿತ ಜನರಿಗೆ ಮಾತ್ರ ನೌಕರಿ ಸಿಗುತ್ತದ್ದು ಉಳಿದವರಿಗೆ ನೀಡಲು ಆಗುವುದಿಲ್ಲ. ಅದಕ್ಕಾಗಿ ಇಂದು ಶಿಕ್ಷಣದಲ್ಲಿ ಕೌಶಲ್ಯಾಧಾರಿತ ಕೋರ್ಸಗಳನ್ನು ತರುವ ಅವಶ್ಯಕತೆಯಿದೆ ಎಂದು ಹೇಳಿದರುಬಿ.ಆರ್. ಪೋಲಿಸ ಪಾಟೀಲ ಮಾತನಾಡಿ ಶಿಕ್ಷಕ ವೃತ್ತಿಯಲ್ಲಿಯ ತೃಪ್ತಿಯು ಮತ್ಯಾವ ವೃತ್ತಿಯಲ್ಲಿ ಕಾಣಲು ಸಾಧ್ಯವಿಲ್ಲ, ನೀತಿ ಇಲ್ಲದ ಶಿಕ್ಷಣ ಮಿತಿ ಇಲ್ಲದ ಅತಿಯಾದ ಭ್ರ್ರಷ್ಟಾಚಾರ ಬಹಳಷ್ಟು ಅಪಾಯಕಾರಿಯಾಗಿದ್ದು ಇದನ್ನು ಸರಿಪಡಿಸದ ಹೊರತು ಎನನ್ನು ಮಾಡಲಾಗದು, ಶಿಕ್ಷಕರು ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು, ಅವಾಗ ಮಾತ್ರ ಮಕ್ಕಳಿಗೆ ಹೊಸ ಹೊಸ ವಿಚಾರಗಳನ್ನು ಸುದ್ದಿಗಳನ್ನು ಹೇಳಲು ಸಾದ್ಯವೆಂದು ಹೇಳಿದರು.
ರಾಷ್ಟ್ರಪ್ರಶಸ್ತಿ ಶಿಕ್ಷಕ ಎನ್.ಡಿ. ಗೊರವರ ಮಾತನಾಡಿ ಬಾದಾಮಿಯು ಸಾಂಸ್ಕೃತಿ ಕವಾಗಿ ಸಂಪ್ರದಾಯದ ತವರೂರು. ಇಲ್ಲಿ ನಮ್ಮನ್ನು ಗರುತಿಸಿ ಹೃದಯ ಸ್ಪರ್ಶಿ ಕಾರ್ಯಕ್ರಮದಲ್ಲಿ ಸನ್ಮಾನಿಸಿರುವುದು ನಿಜಕ್ಕೂ ಅರ್ಥಗರ್ಭಿತ ವಾಗಿದೆ, ಇಂದು ನಮ್ಮ ಶಿಕ್ಷಣದಲ್ಲಿ ಗುಣಾತ್ಮಕ ಶಿಕ್ಷಣದೂಂದಿಗೆ ಮಾನವೀಯ ಮೌಲ್ಯಗಳ ಶಿಕ್ಷಣದ ಅವಶ್ಯಕತೆಯಿದ್ದು, ತಂತ್ರಜ್ಞಾನದ ಯುಗದಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ವಿದ್ಯಗಳನ್ನು ಕಲಿತರೆ ಬದುಕು ಸಾರ್ಥಕವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರಮನ್ ಎ.ಸಿ. ಪಟ್ಟಣದ. ಉಪ ಚೇರಮನ್ ಐ.ಕೆ. ಪಟ್ಟಣಶೆಟ್ಟಿ, ಡಾ. ಎಸ್.ಐ.ಪತ್ತಾರ, ಎಸ್.ಜಿ. ಬೀರನೂರ, ಅವಿನಾಶ ಮಮದಾಪೂರ, ಅಶೋಕ ಜವಳಿ, ಪ್ರೊ ರೀ ಎಸ್.ಎಮ್. ಯಲಿಗಾರ, ವಿ.ಎಸ್,ಬಾನದ, ಶ್ರೀದೇವಿ ಬಡಿಗೇರ, ಎಸ್.ಆರ್.ಮಠಪತಿ, ಎಲ್. ಎಮ್.ಚೌದ್ರಿ., ವಾಯ್.ಎಚ್.ಕಲಾದಗಿ, ಎಸ್.ಎಸ್.ಮಿಟ್ಟಲಕೋಡ, ಸಂಗಮೇಶ ಜವಳಿ, ಎಸ್.ವಿ.ಮೇಲಿನಮನಿ ,ಎಸ್ಟಿ . ದೇವಾಡಿಗ, ಎಸ್.ಜಿ.ಕೋಟಿ. ಪ್ರೇಮಾ ಮಾಳವಾಡ, ಅಮೃತಾ ಮಾಳವಾಡ ಪಾಲ್ಗೊಂಡಿದ್ದರು

 

► Follow us on –  Facebook / Twitter  / Google+

 

Facebook Comments

Sri Raghav

Admin