ಶಿಯಾ ಮುಸ್ಲಿಮರ ಮನಗೆದ್ದ ಪ್ರಧಾನಿ ನರೇಂದ್ರ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-012asfgasgSAG

ನವದೆಹಲಿ,ಆ.22- ವಿಶ್ವದ ಮುಸ್ಲಿಂ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧಗಳನ್ನು ಮತ್ತಷ್ಟು ಸುಧಾರಿಸುವ ಭಾರತದ ಯತ್ನದ ಭಾಗವಾಗಿ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಇಂದು ಇರಾಕ್ನ ಪವಿತ್ರ ನಗರಿ ಕರ್ಬಾಲಾಗೆ ಭೇಟಿ ನೀಡಿದ್ದಾರೆ. ಸಿರಿಯಾ, ಲೆಬನಾನ್ ಮತ್ತು ಇರಾಕ್ ಒಳಗೊಂಡಂತೆ ಪಶ್ಚಿಮ ಏಷ್ಯಾ ಪ್ರವಾಸದಲ್ಲಿರುವ ಅಕ್ಬರ್ ಅವರ ಈ ಭೇಟಿ ಮುಸ್ಲಿಂ ಜಗತ್ತಿನೊಂದಿಗೆ ಬಾಂಧವ್ಯ ವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಹಾಗೂ ಯುದ್ಧ ಸಂತ್ರಸ್ತ ದೇಶಗಳಲ್ಲಿ ಹೊಸ ಮನ್ವಂತರದ ಆಶಾಭಾವನೆ ಮೂಡಿಸಿದೆ.
ಇರಾಕ್ ರಾಜಧಾನಿ ಬಾಗ್ದಾದ್ನಿಂದ 100 ಕಿ.ಮೀ ದೂರವಿರುವ ಈ ನಗರವು ಪ್ರಾಚೀನ ಕರ್ಬಾಲಾ ಸಮರಕ್ಕೆ ಸಾಕ್ಷಿಯಾಗಿ ನಿಂತಿದೆ. ಇದು ಶಿಯಾ ಮುಸ್ಲಿಮರ ಇತಿಹಾಸ ಮತ್ತು ಸಂಸ್ಕೃತಿಯ ನೆಲೆಬೀಡು. ಪ್ರತಿವರ್ಷ ಮೊಹರಂ ವೇಳೆ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.  ಮುಸ್ಲಿಮರ ಪವಿತ್ರ ನಗರಿಯಾದ ಇದು ಪ್ರವಾದಿ ಮಹಮದ್ ಅವರ ಮೊಮ್ಮಗ ಶಿಯಾ ಹುತಾತ್ಮ ಇಮಾಮ್ ಹುಸೇನ್ ಅವರು ಕೊನೆಯುಸಿರೆಳೆದ ಸ್ಥಳವೂ ಹೌದು. ಇರಾಕ್ನ ಶ್ರೀಮಂತ ನಗರಗಳಲ್ಲಿ ಒಂದಾದ ಕರ್ಬಾಲಾ ಧಾರ್ಮಿಕ ಕ್ಷೇತ್ರವಾಗಿ ವಿಶೇಷ ಮಾನ್ಯತೆ ಪಡೆದಿದೆ.

ಈ ಪವಿತ್ರ ನಗರಿಗೆ ಸಚಿವ ಅಕ್ಬರ್ ಭೇಟಿ ಬಗ್ಗೆ ಶಿಯಾ ಧಾರ್ಮಿಕ ಮುಖಂಡರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ಬಾಲಾಗೆ ಭಾರತದ ಸಚಿವರೊಬ್ಬರು ಭೇಟಿ ನೀಡಿರುವುದು ಇಸ್ಲಾಂ ದೇಶಗಳನ್ನೂ ತಲುಪುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕ ಯತ್ನವನ್ನು ಸಾಬೀತು ಮಾಡುತ್ತದೆ ಎಂದು ಪೀಸ್ ಪಾರ್ಟಿ ಮುಖಂಡ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಅವರು ಇತ್ತೀಚೆಗೆ ಸೌದಿ ಅರೇಬಿಯಾಗೆ ಭೇಟಿ ನೀಡಿದಾಗ, ಭಾರತದ ಮುಖಂಡರ ಭೇಟಿ ಕೇವಲ ಸುನ್ನಿ ಮುಸ್ಲಿಂ ಪ್ರಾಬಲ್ಯವಿರುವ ದೇಶಗಳಿಗಷ್ಟೇ ಸೀಮಿತವಾಗಬಾರದು. ಅದು ಶಿಯ ಮುಸ್ಲಿಮರು ಹೆಚ್ಚಾಗಿರುವ ಸ್ಥಳಗಳಿಗೂ ವಿಸ್ತರಣೆಯಾಗಬೇಕು ಎಂದು ನಿಯೋಗವು ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಮೋದಿ ಈಗ ಈ ದೇಶಗಳ ಪ್ರವಾಸಕ್ಕೆ ಅಕ್ಬರ್ ಅವರನ್ನು ನಿಯೋಜಿಸಿರುವುದು ಶಿಯಾ ಮುಸ್ಲಿಂ ಮುಖಂಡರಲ್ಲಿ ಸಂತಸ ಮೂಡಿಸಿದೆ.

ಅಕ್ಬರ್ ಅವರು ಪಶ್ಚಿಮ ಏಷ್ಯಾದ ಮುಸ್ಲಿಂ ರಾಷ್ಟ್ರಗಳಿಗೆ ಭೇಟಿ ನೀಡಿರುವುದರಿಂದ ಅದರಲ್ಲೂ ವಿಶೇಷವಾಗಿ ಕರ್ಬಾಲಾಗೆ ತೆರಳಿರುವುದರಿಂದ ಈ ಗಲಭೆ ಪೀಡಿತ ಸ್ಥಳಗಳಲ್ಲಿ ಶಾಂತಿ ಸ್ಥಾಪನೆಗೆ ಮೋದಿ ಇಟ್ಟಿರುವ ದಿಟ್ಟ ಹೆಜ್ಜೆಗಳನ್ನು ರುಜುವಾತುಪಡಿಸುತ್ತದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin