ಶಿಲ್ಪಾ ಪತಿ ರಾಜ್ ಕುಂದ್ರಾ ದೀಪಿಕಾಳ ಪಟ್ಟಾ ಅಭಿಮಾನಿಯಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

deepika-shilpa-kundra

ಹೋಲಿಕೆ ಮತ್ತು ಪೈಪೋಟಿ -ಚಿತ್ರರಂಗದಲ್ಲಿ ಸರ್ವೆ ಸಾಮಾನ್ಯ. ಆದರೆ, ಬಾಲಿವುಡ್‍ನ ಚಿರಯುವತಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಶಾಕ್ ಆಗುವ ಸಂಗತಿಯೊಂದು ಕುಟುಂಬದಲ್ಲೇ ನಡೆದಿದೆ. ತನ್ನ ಆಕರ್ಷಕ ಬಳಕುವ ಮೈಮಾಟದ ಬಗ್ಗೆ ಬಾಲಿವುಡ್ ಸುರಸುಂದರಿಯೇ ಅಸೂಯೆ ಪಡುತ್ತಿದ್ದಾರೆ. ಆದರೆ, ತನ್ನನ್ನು ಮೆಚ್ಚಿ ಕೈಹಿಡಿದ ಪತಿರಾಯನಿಗೆ (ರಾಜ್ ಕುಂದ್ರಾ) ನನಗಿಂತಲೂ ದೀಪಿಕಾ ಪಡುಕೋಣೆಯೇ ಅತ್ಯಂತ ಮೆಚ್ಚಿನ ನಟಿಯಾಗಿರುವ ಸಂಗತಿ ತಿಳಿದು ಒಳಗೊಳಗೆ ಅಸೂಯೆಪಡುತ್ತಿದ್ದಾಳೆ (ಇದನ್ನು ವೃತ್ತಿಮಾತ್ಸರ್ಯ ಎನ್ನಬಹುದೇನೋ). ಶಿಲ್ಪಾಳಿಗೆ ಈ ವಿಷಯ ಗೊತ್ತಾಗಿದ್ದು ತನ್ನ ಐದು ವರ್ಷದ ಮುದ್ದಾದ ಮಗ ವಿಯಾನ್ ಕುಂದ್ರಾ ಮೂಲಕ.ಶಿಲ್ಪಾ ತನ್ನ ಕುಟುಂಬದೊಂದಿಗೆ ರಜೆಯ ಮಜಾ  ಕಳೆಯಲು ಪ್ರವಾಸ ಕೈಗೊಂಡಿದ್ದಳು. ಪತಿ ಮತ್ತು ಮಗನೊಂದಿಗೆ ಏರ್ಪೋರ್ಟ್  ಬಂದಾಗ ಅಲ್ಲಿದ್ದ ದೀಪಿಕಾ ಪಡುಕೋಣೆಯ ದೊಡ್ಡ ಪೋಸ್ಟರ್  ನೋಡಿ ವಿಯಾನ್ ಪುಟ್ಟ-ಪುಟ್ಟ ಹೆಜ್ಜೆ ಹಾಕುತ್ತಾ ಅಲ್ಲಿಗೆ ಹೋದ. ಇದು ದೀಪಿಕಾ ಪಡುಕೋಣೆ.. ನನ್ನ ಡ್ಯಾಡಿಯ ಫೇವರೇಟ್ ನಟಿ ಎಂದು ಬಾಯ್ಬಿಟ್ಟ. ತನ್ನ ಗಂಡ ಒಳಗೊಳಗೇ ಡಿಪ್ಪಿಯ ಪರಮ ಅಭಿಮಾನಿಯಾಗಿರುವ ಸುದ್ದಿ ಕಂಡು ಶಿಲ್ಪ ಕೆಲ ಕ್ಷಣ ತಬ್ಬಿಬ್ಬಾದಳು. ಏರ್ಪೋರ್ಟ್ ನಲ್ಲಿ  ನಡೆದ ಈ ಪ್ರಸಂಗವನ್ನು ರಾಜ್‍ಕುಂದ್ರಾ ವಿಡಿಯೋ ಮಾಡಿ ಸಾಮಾಜಿಕ ಜಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ನನ್ನ ಮಗ ಬೆಕ್ಕನ್ನು ಚೀಲದಿಂದ ಹೊರ ಬಿಟ್ಟಿದ್ದಾನೆ (ನನ್ನ ಗುಟ್ಟು ಬಿಚ್ಚಿದ್ದಾನೆ). ನಾನೂ ಯಾರ ಅಭಿಮಾನಿಯಾದರೂ ನನ್ನ ಪ್ರೀತಿ-ಪ್ರೇಮ ಮಂಗಳೂರು ಬೆಡಗಿಯ (ಶಿಲ್ಪಾ ಶೆಟ್ಟಿ) ಮೇಲೆಯೇ ಎಂಬ ಶೀರ್ಷಿಕೆ ನೀಡಿ ಪ್ರಹಸನವನ್ನು ತಿಳಿಗೊಳಿಸಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin