ಶಿವಾಜಿ ಸೂರತ್ಕಲ್ ಚಿತ್ರದ ಶೂಟಿಂಗ್ ನಲ್ಲಿ ರಮೇಶ್ ಅರವಿಂದ್ ಬ್ಯುಸಿ

ಈ ಸುದ್ದಿಯನ್ನು ಶೇರ್ ಮಾಡಿ

ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಅಭಿನಯಿಸುತ್ತಿರುವ ಶಿವಾಜಿ ಸೂರತ್ಕಲ್ ಚಿತ್ರದ ಚಿತ್ರೀಕರಣ ನಿರಂತರವಾಗಿ ಸಾಗುತ್ತಿದೆ. ಶಿವಾಜಿ ಪಾತ್ರದಲ್ಲಿ ರಮೇಶ್ ಅರವಿಂದ್ ನಟಿಸಿದರೆ, ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಪತ್ನಿ ಜನನಿ ಪಾತ್ರವನ್ನು ಮಾಡುತ್ತಿದ್ದಾರೆ.

ಚಿತ್ರದ ಕಥೆಯಲ್ಲಿ ಶಿವಾಜಿ ಒಬ್ಬ ಅಪೂರ್ವ ಪತ್ತೇದಾರಿ ಹಾಗೂ ದಕ್ಷ ಪೊಲೀಸ್ ಅಧಿಕಾರಿ. ಮೈಸೂರಿನ ಎಸಿಪಿ ಕ್ರೈಂ ಬ್ರಾಂಚ್‍ನ ಬಹುಬೇಡಿಕೆಯ ಆಫೀಸರ್. ಜನನಿ ಅದೇ ಮೈಸೂರಿನಲ್ಲಿ ನ್ಯಾಯಕ್ಕಾಗಿ ಹೋರಾಡುವ ವಕೀಲೆ.

ಇತ್ತೀಚೆಗಷ್ಟೇ ಚಿತ್ರ ತಂಡ ರಮೇಶ್ ಅರವಿಂದ್ ಹಾಗೂ ರಾಧಿಕಾ ಚೇತನ್‍ರ ಬಾಂಧವ್ಯದ ಬಗ್ಗೆ ಒಂದು ಹಾಡಿನ ಚಿತ್ರೀಕರಣ ಮುಗಿಸಿದೆ. ಮೈಸೂರಿನ ತಾಣಗಳಾದ ಚಾಮುಂಡೇಶ್ವರಿ ದೇವಾಲಯ, ಮೈಸೂರು ಅರಮನೆ, ಕೆಆರ್ ಸರ್ಕಲ್ ಹೀಗೆ ಸುಮಾರು ಜನಪ್ರಿಯ ತಾಣಗಳನ್ನು ಸೆರೆ ಹಿಡಿದಿದ್ದಾರೆ.

ದೃಶ್ಯಗಳು ವಿಶೇಷವಾಗಿ ಬರಲೆಂದು ಚಿತ್ರತಂಡ ವಿಭಿನ್ನ ರೀತಿಯ ಲೆನ್ಸಿಂಗ್ ಮಾಡಿದ್ದಾರೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ. ರೇಖಾ ಕೆ.ಎನ್.ಅನೂಪ್‍ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರು ಪ್ರಸಾದ್ ಛಾಯಾಗ್ರಹಣ ವಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ. ಹಾಡಿನ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿಯವರು ಬರೆಯುತ್ತಿದ್ದಾರೆ. ಹಾಡಿನ ರೆಕಾರ್ಡಿಂಗ್ ಶೀಘ್ರದ ಆಗಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ